ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟ: ಶೇ.93.12 ರಷ್ಟು ವಿದ್ಯಾರ್ಥಿಗಳು ತೇರ್ಗಡೆ

ನವದೆಹಲಿ: 12ನೇ ತರಗತಿ ಫಲಿತಾಂಶ ಪ್ರಕಟ ಬೆನ್ನಲ್ಲೇ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ CBSEಯ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.  

ಈ ವರ್ಷ ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.93.12ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 

 ಈ ವರ್ಷ ಒಟ್ಟಾರೆ ಶೇಕಡಾ 93.12 ರಷ್ಟು ಉತ್ತೀರ್ಣರಾಗಿದ್ದಾರೆ, ಇದು ಕಳೆದ ವರ್ಷದ 94.40 ಶೇಕಡಾಕ್ಕಿಂತ 1.28 ಶೇಕಡಾ ಕಡಿಮೆಯಾಗಿದೆ. ತಿರುವನಂತಪುರ ಪ್ರದೇಶದಲ್ಲಿ, CBSE 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 99.91 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗುವಾಹಟಿಯಲ್ಲಿ ಶೇಕಡಾ 76.90 ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.CBSE 10ನೇ ತರಗತಿ ಫಲಿತಾಂಶ ನೋಡಲು cbse.gov.in ಮತ್ತು cbse.nic.in ನಲ್ಲಿ ಪರಿಶೀಲಿಸಬಹುದು. 

ಫಲಿತಾಂಶಗಳನ್ನು ಪರಿಶೀಲಿಸಲು cbseresults.nic.in, results.cbse.nic.in, digilocker.gov.in ಮತ್ತು results.gov.in. ವೆಬ್‌ಸೈಟ್‌ಗಳನ್ನು ನೋಡಬಹುದು. ಫಲಿತಾಂಶಗಳನ್ನು ಮೊಬೈಲ್ ಅಪ್ಲಿಕೇಷನ್- ಡಿಜಿಲಾಕರ್ ಮತ್ತು ಉಮಾಂಗ್ ನಲ್ಲಿ ಕೂಡ ನೋಡಬಹುದು. 

Latest Indian news

Popular Stories