ದೆಹಲಿಯ ಡಾ ಇಬಾದುರ್ ರಹಮಾನ್ ರವರ ‘ಪರಿಸರ ಸ್ನೇಹಿ ಸಿಮೆಂಟ್’ ಆವಿಷ್ಕಾರಕ್ಕೆ ಆಸ್ಟ್ರೇಲಿಯಾದ ಪೇಟೆಂಟ್

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ (ಜೆಎಂಐ) ಅಧ್ಯಾಪಕರು ಪರಿಸರ ಸ್ನೇಹಿ ಸಿಮೆಂಟ್ ಅನ್ನು ಕಂಡುಹಿಡಿದಿದ್ದಾರೆ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಇಬಾದುರ್ ರಹಮಾನ್ ಮತ್ತು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಶೋಧಕರು ಸೇರಿ ಈ ಸಿಮೆಂಟ್ ಅನ್ನು ಕಂಡುಹಿಡಿದರು. ಆಸ್ಟ್ರೇಲಿಯಾ ಸರ್ಕಾರದ ಪೇಟೆಂಟ್ ಕಚೇರಿ ಈ ಸಿಮೆಂಟ್‌ಗೆ ಪೇಟೆಂಟ್ ನೀಡಿದೆ.

‘ಮಾರ್ಪಡಿಸಿದ ಸಿಮೆಂಟ್ ತಯಾರಿಸುವ ಮತ್ತು ಯಾಂತ್ರಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಮೌಲ್ಯಮಾಪನ ಮಾಡುವ ವಿಧಾನ’ ಎಂಬುದು ಆವಿಷ್ಕಾರದ ಶೀರ್ಷಿಕೆಯಾಗಿದೆ , ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಪರಿಸರ ಸಂರಕ್ಷಣೆಯ ಬಹಳ ಅಗತ್ಯವಿದೆ, ಇಂತಹ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಮತ್ತು ಕೈಗಾರಿಕೆಗಳಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು ಮುಖ್ಯ ಎಂದು ಡಾ. ರಹಮಾನ್ ಹೇಳಿದರು.

ಪ್ರೊಫೆಸರ್ ಮೊಹಮ್ಮದ್ ಆರಿಫ್, ಪ್ರೊಫೆಸರ್ ಅಬ್ದುಲ್ ಬಕಿ, ಡಾ ಎಂ ಶಾರಿಕ್, ಮೊಹಮ್ಮದ್ ಗಮಾಲ್ ಅಲ್-ಹಗ್ರಿ ಮತ್ತು ಅಮೆರ್ ಸಲೇಹ್ ಅಲಿ ಹಸನ್ ರವರು ಈ ಸಂಶೋಧನೆಯಲ್ಲಿದ್ದ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಸಹ-ಸಂಶೋಧಕರು.

ಈ ಆವಿಷ್ಕಾರವು ಸಿಮೆಂಟ್ ಬದಲಿಗೆ ಮೈಕ್ರೋ-ಸಿಲಿಕಾ ಫ್ಯೂಮ್, ನ್ಯಾನೊ-ಸಿಲಿಕಾ ಫ್ಯೂಮ್ ಮತ್ತು ಫ್ಲೈ ಬೂದಿಯ ಸಂಯೋಜನೆಯ ಕಾಂಕ್ರೀಟ್ ಮಿಶ್ರಣಗಳಾಗಿವೆಯೆಂದು ಮತ್ತು ಮೈಕ್ರೋ ಮತ್ತು ನ್ಯಾನೊ-ಸಿಲಿಕಾ ಹೊಗೆಯ ಮಿಶ್ರಣವು ಕಾಂಕ್ರೀಟ್‌ನ ಯಾಂತ್ರಿಕ ಗುಣಲಕ್ಷಣಗಳನ್ನು ಸುಧಾರಿಸುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿದೆ.

ಡಾ. ರಹಮಾನ್ ತಮ್ಮ ಪಿಎಚ್‌ಡಿ ಸಂಶೋಧನೆಯ ಸಮಯದಿಂದ ನ್ಯಾನೊ ಆಧಾರಿತ ಮಾರ್ಪಡಿಸಿದ ಸಿಮೆಂಟ್ ಮತ್ತು ಕಾಂಕ್ರೀಟ್ ಸಂಯೋಜನೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಕಳೆದ 8 ವರ್ಷಗಳಿಂದ ಈ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ ಮತ್ತು ಡಾ. ರಹಮಾನ್ ರವರು ಈಗ ಎರಡು ಪೇಟೆಂಟ್ಗಳನ್ನು ಹೊಂದಿದ್ದಾರೆಂದು ಜೆಎಂಐ ಅಧಿಕೃತ ಹೇಳಿಕೆ ನೀಡಿದೆ.

Latest Indian news

Popular Stories

error: Content is protected !!