NEET ಟಾಪ್ ಸ್ಕೋರರ್ ಅಮನ್ ಅಬ್ದುಲ್ ಹಕೀಂಗೆ ಸನ್ಮಾನ

ಮಂಗಳೂರು: ನೀಟ್ ಯುಜಿ‌ 2024ರ ಪರೀಕ್ಷೆಯಲ್ಲಿ 710 ಅಂಕಗಳೊಂದಿಗೆ ಎಐಆರ್ 592 ರ್ಯಾಂಕ್ ಗಳಿಸಿರುವ ಮಂಗಳೂರಿನ ಟಾಪ್ ಸ್ಕೋರರ್ ಅಮನ್ ಅಬ್ದುಲ್‌ ಹಕೀಂ ದ್ವಿತೀಯ ಟಾಪರ್ ಸಿಂಚನಾರನ್ನು ಆಕಾಶ್ ಎಜುಕೇಶನಲ್‌ ಸರ್ವೀಸಸ್‌ ಲಿಮಿಟೆಡ್‌ (ಎಇಎಸ್ಎಲ್) ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.

ಸಂಸ್ಥೆಯ ಮಂಗಳೂರು ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಸನ್ಮಾನಿಸಿದರು.

ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿ ಅಮನ್ ಅಬ್ದುಲ್ ಹಕೀಂ, ವೇಳಾಪಟ್ಟಿಯಂತೆ ಶಿಸ್ತಿನ ಅಧ್ಯಯನ ನಡೆಸಿದ ಕಾರಣದಿಂದಾಗಿ ತಮಗೆ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದರು.


ಪರೀಕ್ಷೆಯ ಬಗ್ಗೆ ಯಾವುದೇ ಭಯ ಇಟ್ಟುಕೊಳ್ಳದೆ ಕಠಿಣ ಪರಿಶ್ರಮದ ಮೂಲಕ ತಯಾರಿ ನಡೆಸಿದರೆ ಯಾವುದೇ ಸಮಸ್ಯೆಗೂ ಉತ್ತರಿಸಲು ಮತ್ತು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಅಮನ್ ಹೇಳಿದರು.
ಮಂಗಳೂರಿನ ಕೆಎಂಎಸಿಯಲ್ಲಿ ಅಸೋಸಿಯೆಟ್ ಪ್ರೊಫೆಸರ್ ಡಾ.ಆಲಂ‌ ನವಾಝ್ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಸೌದಾ ಆಲಂ ನವಾಝ್ ದಂಪತಿಯ ಪುತ್ರ ಅಮನ್ ಅಬ್ದುಲ್ ಹಕೀಂ ಮುಂದೆ ಜನರಲ್ ಫಿಸಿಶಿಯನ್ ಅಥವಾ ನ್ಯೂರೊ ಸರ್ಜನ್ ಆಗುವ ಗುರಿ ಇಟ್ಟುಕೊಂಡಿದ್ದಾರೆ.


ಕಾರ್ಯಕ್ರಮದಲ್ಲಿ ಎಇಎಸ್ಎಲ್ ನ ಸಹಾಯಕ ನಿರ್ದೇಶಕ ಶ್ಯಾಮ ಪ್ರಸಾದ್, ಬ್ರಾಂಚ್ ಹೆಡ್ ವಿಶ್ವನಾಥ ಉಪಸ್ಥಿತರಿದ್ದರು.

Latest Indian news

Popular Stories