ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿAದ ಜನಜಾಗೃತಿ ಅಭಿಯಾನ

ಮಡಿಕೇರಿ ಜ.೧೩ : ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನೇತೃತ್ವದಲ್ಲಿ “ರೈತ ಭದ್ರತೆ, ದೇಶದ ಸುಭದ್ರತೆ” ಎಂಬ ಘೋಷವಾಕ್ಯದೊಂದಿಗೆ ಜನಜಾಗೃತಿ ಅಭಿಯಾನವನ್ನು ನಡೆಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ಬಶೀರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಅಭಿಯಾನದ ಪ್ರಚಾರ ಭಿತ್ತಿಪತ್ರ ಬಿಡುಗೊಡೆಗೊಳಿಸಿ ಮಾತನಾಡಿದ ಅವರು, ರಾಜ್ಯವ್ಯಾಪಿ ಈ ಅಭಿಯಾನ ನಡೆಯಲಿದ್ದು, ಧರಣಿ ಸತ್ಯಾಗ್ರಹ ಮತ್ತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದರು.
ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಇಂದು ಕೃಷಿ ರಂಗಕ್ಕೆ ಸಂಬAಧಿಸಿದ ಚಟುವಟಿಕೆಗಳು ವೈಫಲ್ಯದೆಡೆಗೆ ಸಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳನ್ನು ತೃಪ್ತಿಪಡಿಸುವ ಸಲುವಾಗಿ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿತ್ತಿದೆ, ಅಲ್ಲದೆ ಅನ್ನದಾತರನ್ನು ಕಡೆಗಣಿಸುತ್ತಿದೆ ಎಂದು ಟೀಕಿಸಿದರು.
ಬೆಂಬಲ ಬೆಲೆ, ನೀರಾವರಿ ಸೌಲಭ್ಯ, ಮಾರುಕಟ್ಟೆೆ, ಬಿತ್ತನೆ ಬೀಜ, ರಸಗೊಬ್ಬರ, ದಾಸ್ತಾನು ಕೊರತೆ ಸೇರಿದಂತೆ ವಿವಿಧ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಬೆಳೆಗಾರರು ಹಾಗೂ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ಚುನಾವಣೆಗಳ ಬಗ್ಗೆ ಚಿಂತಿತವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ಹಾಗೂ ಜನಪರ ಕಾಳಜಿಯನ್ನು ಮರೆತಿವೆ ಎಂದು ಬಶೀರ್ ಆರೋಪಿಸಿದರು.
ಜಿಲ್ಲೆಯ ಪ್ರಜ್ಞಾವಂತ ನಾಗರೀಕರು, ರೈತರು ಹಾಗೂ ಯುವಜನರು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಸತೀಶ್ ಮಾಸ್ಟರ್, ಸದಸ್ಯರುಗಳಾದ ಕೆ.ಕೆ.ಅಶೋಕ್, ಕೆ.ಎಂ.ಆಸಿಫಾ ನಿಝಾಂ, ರವೂಫ್ ಕಟ್ಟೆಕಾಡು ಹಾಗೂ ನಿಝಾಂದ್ದೀನ್ ಉಪಸ್ಥಿತರಿದ್ದರು. ಫೋಟೋ :: ವೆಲ್ಫೇರ್ ಪಾರ್ಟಿ

Latest Indian news

Popular Stories