ನಗರಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಅಂಬರೀಶ್, ವಿನಯ್ : Municipal Elections

ಬೀದರ್: Municipal Elections ಜಲ ಸಾಕ್ಷರತೆ, ನೀರು ನಿರ್ವಹಣೆ ಮತ್ತು ಪರಿಸರ ಸಂಬAಧಿ ಚಟುವಟಿಕೆಗಳ ಮೂಲಕ ಹೆಸರು ಮಾಡಿರುವ ಇಬ್ಬರು ಸಾಮಾಜಿಕ ಕಾರ್ಯಕರ್ತರು ಬೀದರ್ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಅಲಿಯಾಬಾದ್ ಕರೇಜ್ ಸಂರಕ್ಷಣಾ ಕಾರ್ಯದಲ್ಲಿ ಕಾಳಜಿಯಿಂದ ತೊಡಗಿಸಿಕೊಂಡಿರುವ ವಿನಯ ಮಾಳಗೆ ಜೆಡಿಎಸ್ ಅಭ್ಯರ್ಥಿಯಾಗಿ ವಾರ್ಡ್ ನಂ. 13 ರಲ್ಲಿ ಸ್ಪರ್ಧಿಸಿದ್ದಾರೆ. ಪಾಪನಾಶ ಕೆರೆ ಸಂರಕ್ಷಣೆಗೆ ಯಶಸ್ವಿ ಕಾನೂನು ಹೋರಾಟ ನಡೆಸಿದ ಪರಿಸರ ಕಾರ್ಯಕರ್ತ ಅಂಬರೀಶ ಕೆಂಚಾ ಅವರು ವಾರ್ಡ್ ನಂ. 29 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಬ್ಬರ ಸ್ಪರ್ಧೆಯ ಹಿಂದೆಯೂ ಹಲವು ಕುತೂಹಲಕಾರಿ ಸಂಗತಿಗಳಿವೆ.
ಸಮಾನಮನಸ್ಕ ಗೆಳೆಯರೊಂದಿಗೆ ಸೇರಿಕೊಂಡು ಟೀಂ ಯುವಾ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು ವಿನಯ್ ಮಾಳಗೆ. ಗಮನಿಸಬೇಕಾದ ಸಂಗತಿ ಎಂದರೆ, ಟೀಂ ಯುವಾ ಸಂಸ್ಥೆಯು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಅತ್ಯುತ್ತಮ ಸಂವಹನ ಕಲೆ ಇರುವ ವಿನಯ್, ಸಮಾಜಕ್ಕೆ ಒಳಿತಾಗಬಹುದಾದ ಕೆಲಸಗಳನ್ನು ಸ್ವತ: ಹುಡುಕಿ ಮಾಡುವ ಮನೋಭಾವದವರು. ಸಂಘರ್ಷ, ಹೋರಾಟದ ಹಿನ್ನೆಲೆ ಸ್ವಲ್ಪ ಕಡಿಮೆ. ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ ಮಾತಿನ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಜಾಣ್ಮೆ ವಿನಯ್ ಅವರಲ್ಲಿದೆ.
ಅಂಬರೀಶ್ ಕೆಂಚಾ ಅವರದ್ದು ಭಿನ್ನ ಸ್ವಭಾವ. ಪಾಪನಾಶ ಕೆರೆಯೊಳಗೆ ಶಿವನ ಮೂರ್ತಿ ಕೂಡಿಸಲು ಮುಂದಾದ ಜಿಲ್ಲಾ ಆಡಳಿತದ ವಿರುದ್ಧವೇ ಅಂಬರೀಶ ಹೋರಾಟ ನಡೆಸಿದ್ದರು. ಪಾಪನಾಶ ಕೆರೆಗೆ ಚರಂಡಿ ನೀರು ಸೇರುತ್ತಿರುವುದರ ವಿರುದ್ಧವೂ ಅವರು ಧ್ವನಿ ಎತ್ತಿದ್ದರು. ರಾಷ್ಟಿçÃಯ ಹಸಿರು ಪೀಠದ ಮೊರೆ ಹೋಗಿದ್ದಲ್ಲದೆ, ಕೆರೆಯೊಳಗೆ ಮೂರ್ತಿ ಕೂಡಿಸುವ ಪ್ರಸ್ತಾವನೆ ಬಿದ್ದು ಹೋಗುವಂತೆ ಮಾಡಿದ್ದರು. ಪಾಪನಾಶ ಕೆರೆ ಸೇರುತ್ತಿದ್ದ ಚರಂಡಿ ನೀರಿನ ಸಮಸ್ಯೆಯೂ ಕೊನೆಗೊಂಡಿದೆ.
ಕೋಟೆ ಸುತ್ತಲಿನ ಕಂದಕ ಸ್ವಚ್ಛತೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊAಡು ಜಾಗೃತಿ ಮೂಡಿಸಲು ಕೆಂಚಾ ಶ್ರಮಿಸಿದ್ದಾರೆ. ಇದಕ್ಕಾಗಿ ಅವರು ಕೆಲವೊಮ್ಮೆ ಮಾಹಿತಿ ಹಕ್ಕು ಕಾಯ್ದೆಯನ್ನೂ ಬಳಸಿಕೊಂಡಿದ್ದಿದೆ.
ಸಮಾಜದ ವಿಷಯದಲ್ಲಿ ಇಬ್ಬರಿಗೂ ಸಮಾನ ಕಾಳಜಿ. ಇಬ್ಬರೂ ಬೆಳೆದ ಬಂದ ಪರಿಸರ ಭಿನ್ನವಾಗಿದ್ದರಿಂದ ಆದ್ಯತೆಯ ವಿಷಯಗಳು ಬೇರೆ ಆಗಿರಬಹುದು. ಆದರೂ, ಜನರ ಕಷ್ಟಕ್ಕೆ ಸ್ಪಂದಿಸುವ, ಪರಿಹಾರ ದೊರೆಕಿಸಿಕೊಡಲು ಶ್ರಮಿಸುವ ಮನಸು ಇಬ್ಬರಲ್ಲೂ ಇದೆ.

ಕಳೆದ ವರ್ಷ ಕೋವಿಡ್‌ನಿಂದಾಗಿ ಜನ ಕಷ್ಟಕ್ಕೀಡಾದಾಗ ನೆರವಿಗೆ ಧಾವಿಸಿದವರು ವಿನಯ್ ಮಾಳಗೆ. ಲಾಕ್‌ಡೌನ್‌ನಿಂದಾಗಿ ಕಷ್ಟಕ್ಕೀಡಾದವರಿಗೆ ಔಷಧಿಗಳನ್ನೂ ತಲುಪಿಸಿದ್ದರು. ಸೋಂಕಿತರಿಗೆ, ಸೋಂಕಿತರ ಸಂಬAಧಿಕರಿಗೆ ನೆರವಾಗುವ ಕೆಲಸವನ್ನೂ ಅವರು ಕಾಳಜಿಯಿಂದ ಮಾಡಿದ್ದರು.
ಇದೀಗ ಇಬ್ಬರೂ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ. ಇತರೆಲ್ಲ ಕ್ಷೇತ್ರಗಳಿಗಿಂತ ರಾಜಕೀಯ ಭಿನ್ನ. ಯಾವುದರ ಬಗ್ಗೆಯೂ ಖಚಿತವಾಗಿ ಹೇಳಲು ಬಾರದಂತಹ ಸ್ಥಿತಿ. ಉತ್ತಮರ ಆಯ್ಕೆಗೆ ಆದ್ಯತೆ ಸಿಗಬೇಕು ಎಂಬ ಬಯಕೆ ಸಹಜ. ಒಳ್ಳೆಯ ಕೆಲಸ ಮಾಡುತ್ತ ಬಂದಿದ್ದೇವೆ, ಮುಂದೆಯೂ ಮಾಡುತ್ತೇವೆ, ಜನ ಬೆಂಬಲ ನೀಡಬಹುದು ಎಂದು ಅಭ್ಯರ್ಥಿಗಳು ನಿರೀಕ್ಷಿಸುವುದೂ ಸಹಜ. ಆದರೂ, ಮತದಾರರ ಮನ ಅರಿಯುವುದು ಕಷ್ಟ. ಮತದಾರರನ್ನು ಯಾವ ಯಾವ ಸಂಗತಿಗಳು ಪ್ರಭಾವಿಸಬಹುದು ಎಂದು ಅಂದಾಜು ಮಾಡುವುದೂ ಸುಲಭವಾಗಿಲ್ಲ. ಸೇವಾ ಅನುಭವ, ಸಂಘರ್ಷ, ಜನಪರ ಕಾಳಜಿ, ನಾಯಕತ್ವ ಗುಣ ಹೀಗೆ ಏನೆಲ್ಲ ಇದ್ದರೂ ಗೆದ್ದೇ ಗೆಲ್ಲುತ್ತೇವೆ ಎಂದು ಖಚಿತವಾಗಿ ಹೇಳಲು ಬಾರದಂತಹ ಕಾಲ ಇದು. ಅಭ್ಯರ್ಥಿಗಳಲ್ಲಿನ ಒಳ್ಳೆಯ ಸಂಗತಿಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟರೆ ಅನುಕೂಲವಾಗಬಹುದು. ಆದರೂ, ಪಕ್ಷ ರಾಜಕೀಯ, ಜಾತಿ ರಾಜಕೀಯ, ಹಣ ಮುಂತಾದವುಗಳೂ ಮತದಾರರನ್ನು ಪ್ರಭಾವಿಸುವುದು ಸಾಮಾನ್ಯವಾಗಿದೆ.
ಒಳ್ಳೆಯವರು ರಾಜಕೀಯಕ್ಕೆ ಬರಬೇಕು ಎಂದು ಜನ ಆಗಾಗ ಮಾತಾಡಿಕೊಳ್ಳುತ್ತಾರೆ. ಹೀಗೆ ಮಾತನಾಡುವವರಿಗೆ ಈಗೊಂದು ಅವಕಾಶ ಸಿಕ್ಕಿದೆ. ಇಬ್ಬರು ಯುವಕರು ಕಣಕ್ಕಿಳಿದಿದ್ದಾರೆ. ಮತದಾನ ಏ. 27 ರಂದು ನಡೆಯಲಿದೆ. ಎರಡೂ ವಾರ್ಡುಗಳ ಮತದಾರರು ತೀರ್ಮಾನ ಕೈಗೊಳ್ಳಬೇಕಷ್ಟೆ.

Latest Indian news

Popular Stories