ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಜೈಲಿನಿಂದಲೇ ಅಮೃತ್‌ ಸ್ಪರ್ಧೆ

ವಾರಿಸ್‌ ಪಂಜಾಬ್‌ ದೆ ಸಂಘದ ಮುಖ್ಯಸ್ಥ ಅಮೃತ್‌ ಪಾಲ್‌ ಸಿಂಗ್‌ ಪಂಜಾಬ್‌ನ ಖಡೂರ್‌ ಸಾಹೀಬ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ.

ಅಮೃತ್‌ ಪಾಲ್‌ ಪರವಾಗಿ ಆತನ ವಕೀಲರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಗೆ ಸ್ಪರ್ಧಿಸಲು ಇಚ್ಛೆ ಇರಲಿಲ್ಲ. ಆದರೆ ನಾನು ಸ್ಪರ್ಧಿಸುವುದು ಸಮುದಾಯದ ನಿರ್ಧಾರ. ಹೀಗಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಕಳೆದ ವರ್ಷ ಎಪ್ರಿಲ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಮೃತ್‌ ಪಾಲ್‌ನನ್ನು ಬಂಧಿಸಲಾಗಿತ್ತು. ಸದ್ಯ ಆತನನ್ನು ಅಸ್ಸಾಂನ ದಿಬ್ರೂಗಢದ ಜೈಲಲ್ಲಿ ಇರಿಸಲಾಗಿದೆ.

Latest Indian news

Popular Stories