ಬೆಂಗಳೂರು: ಕಾಂತಾರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಕಿಶೋರ್ ಕುಮಾರ್ ಅವರ ಟ್ವಿಟರ್ ಖಾತೆ ಸಸ್ಪೆಂಡ್ ಆಗಿದೆ.
ಈ ಬಗ್ಗೆ, ಎಸ್ ಶ್ಯಾಮ್ ಪ್ರಸಾದ್ ಎನ್ನುವವರು ಟ್ವಿಟ್ ಮಾಡಿದ್ದಾರೆ. ಈಗ ಕೀಶೋರ್‌ರ ಟ್ವಿಟರ್ ಖಾತೆಗೆ ಹೋದರೆ, ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಖಾತೆಯನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಬರುತ್ತಿದೆ.ಈ ಬಗ್ಗೆ, ಎಸ್ ಶ್ಯಾಮ್ ಪ್ರಸಾದ್ ಟೈಟ್‌ಗೆ ಜನರು ತರಹೇವಾರಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಕಾಂತಾರ ಸಿನಿಮಾ ದೇಶದಲ್ಲೆಡೆ ಅಬ್ಬರಿಸಿದ ಸಿನಿಮಾ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟನೆ ಒಂದಡೆ ಎಲ್ಲರ ಮೆಚ್ಚುಗೆ ಗಳಿಸಿದರೆ, ಮತ್ತೊಂದಡೆ ಕಿಶೋರ್ ಅವರ ನಟನೆ ಸಿನಿಮಾಗೆ ಮತ್ತಷ್ಟು ಜೀವ ನೀಡಿದೆ.