ನನ್ನನ್ನು ಹುಚ್ಚಿ ಎಂದು ಭಾವಿಸುವವರಿಗೆ, ನನ್ನ ಹುಚ್ಚುತನದ ಅರಿವಿಲ್ಲ, ಮನೆಗೆ ನುಗ್ಗಿ ಹೊಡೆಯುತ್ತೇನೆ: ಬಾಲಿವುಡ್‌ ಸ್ಟಾರ್ ದಂಪತಿಗೆ ಕಂಗನಾ ವಾರ್ನಿಂಗ್!

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್ ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ತಮ್ಮ ಮೇಲೆ ಬೇಹುಗಾರಿಕೆ ನಡೆಸಿದ್ದ ಆರೋಪದಡಿ ಕಲಾವಿದ ದಂಪತಿಗೆ ಎಚ್ಚರಿಕೆ ನೀಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿ ಜೋಡಿ ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಕಂಗನಾ ಸೋಮವಾರ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಆ ನಟನ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಮೇಲೆ ಸ್ಪೈ ಮಾಡಲಾಗುತ್ತಿದೆ ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.  ನನ್ನ ಬಗ್ಗೆ ಚಿಂತೆ ಮಾಡುತ್ತಿರುವವರಿಗೆ ಇದನ್ನ ಹೇಳುತ್ತಿದ್ದೇನೆ. ನಿನ್ನೆ ರಾತ್ರಿಯಿಂದ ನನ್ನ ಸುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದಿಲ್ಲ. ಕ್ಯಾಮರಾ ಅಥವಾ ಕ್ಯಾಮರಾಗಳಿಲ್ಲದೆ ಯಾರೂ ನನ್ನನ್ನ ಹಿಂಬಾಲಿಸುತ್ತಿಲ್ಲ. ಪದಗಳ ಮೂಲಕ ಅರ್ಥ ಮಾಡಿಕೊಳ್ಳದವರಿಗೆ, ವಿಷಯಗಳನ್ನು ಬೇರೊಂದು ಮಾರ್ಗದಲ್ಲಿ ಅರ್ಥ ಮಾಡಿಸಬೇಕಾಗುತ್ತದೆ’’ ಎಂದು ಇನ್ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಕಂಗನಾ ರಣಾವತ್ ಬರೆದುಕೊಂಡಿದ್ದಾರೆ.

ಚಂಗು – ಮಂಗುಗೆ ಇದು ನನ್ನ ಸಂದೇಶ : ನೀವು ಹಳ್ಳಿಯಿಂದ ಬಂದವರನ್ನು ಎದುರಿಸುತ್ತಿಲ್ಲ. ನಿಮ್ಮನ್ನ ನೀವು ಸರಿಪಡಿಸಿಕೊಳ್ಳಿ ಎಂದು ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಇಲ್ಲವಾದ್ರೆ ನಿಮ್ಮ ಮನೆಗೆ ನುಗ್ಗಿ ನಿಮಗೆ ಹೊಡೆಯುತ್ತೇನೆ. ಕೆಲವರಿಗೆ ನಾನು ಹುಚ್ಚಿ ಎನಿಸಬಹುದು. ನಿಮಗೂ ಅನಿಸಬಹುದು ನಾನು ಹುಚ್ಚಿ ಅಂತ. ಆದರೆ, ನಾನು ಯಾವ ಮಟ್ಟಕ್ಕೆ ಹೋಗಬಹುದು ಎಂಬ ಅಂದಾಜು ನಿಮಗಿಲ್ಲ ಎಂದು ಬರೆದುಕೊಂಡಿದ್ದಾರೆ.

ಎಲ್ಲಿಯೂ ಅವರು ಬಾಲಿವುಡ್​ನ ಯಾವುದೇ ಸೆಲೆಬ್ರಿಟಿ ಜೋಡಿಯ ಹೆಸರುಗಳನ್ನು ಪ್ರಸ್ತಾಪಿಸಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕಂಗನಾ ರಣಾವತ್​ ಅವರು ಸೂಚ್ಯವಾಗಿ ಹೇಳಿರುವ ವಿಚಾರಗಳನ್ನು ಗಮನಿಸಿದರೆ ರಣಬೀರ್​ ಕಪೂರ್ ಮತ್ತು ಆಲಿಯಾ ಭಟ್​ ಕುರಿತಾಗಿಯೇ ಅವರು ಇಷ್ಟೆಲ್ಲ ಹೇಳಿರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ.

Latest Indian news

Popular Stories