ಬಲಪಂಥೀಯರ ವಿರೋಧಕ್ಕೆ ಪ್ರೇಕ್ಷಕರ ಡೋಂಟ್ ಕೇರ್ ಒಂದೇ ದಿನದಲ್ಲಿ ನೂರು ಕೋಟಿ ಬಾಚಿದ ಪಠಾಣ್!

ಶಾರುಖ್ ಖಾನ್ ನಟಿಸಿದ ಪಠಾಣ್ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ಸಾಗರೋತ್ತರ ಗಲ್ಲಾಪೆಟ್ಟಿಗೆಯಲ್ಲೂ ಕೂಡ ಭರ್ಜರಿಯಾಗಿ ಹಿಟ್ ಆಗಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ, ಚಿತ್ರವು ಸುಮಾರು 54 ಕೋಟಿ ರೂಪಾಯಿಗಳನ್ನು ಗಳಿಸಿದೆ ಮತ್ತು ಅಂತರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲೂ ಇದೇ ರೀತಿಯ ಆರಂಭಿಕ ದಾಖಲೆಯನ್ನು ದಾಖಲಿಸಿದೆ. ಒಂದೇ ದಿನದಲ್ಲಿ ನೂರು ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ.

ಬಲಪಂಥೀಯರ ವಿರೋಧಕ್ಕೆ ಕ್ಯಾರೆ ಎನ್ನದ ಪ್ರೇಕ್ಷಕ ಸಿನಿಮಾಕ್ಕೆ ಭರ್ಜರಿಯಾಗಿ ಸ್ಪಂದಿಸಿದ್ದಾರೆ. ಸಿನಿಮಾ ಒಟ್ಟು‌ ವಿಶ್ವಾದ್ಯಂತ 8000 ಕ್ಕೂ ಅಧಿಕ ಚಿತ್ರ ಮಂದಿರದಲ್ಲಿ ತೆರೆ ಕಂಡಿದೆ.

ಆರಂಭಿಕ ಅಂದಾಜಿನ ಪ್ರಕಾರ ‘ಪಠಾಣ್’ ಬುಧವಾರ $4.5 ಮಿಲಿಯನ್ ಗಳಿಸಿದೆ. ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ವಿಶ್ವದಾದ್ಯಂತ ಆರಂಭಿಕ ದಿನದ ಅಂಕಿಅಂಶವು 100 ಕೋಟಿಗೂ ಹೆಚ್ಚು ನಿವ್ವಳವಾಗಿದೆ ಮತ್ತು ‘ಪಠಾಣ್’ ವಿಶ್ವದಾದ್ಯಂತ Rs100-110 ಕೋಟಿಗಳ ಒಟ್ಟು ಸಂಗ್ರಹದೊಂದಿಗೆ ದಾಖಲೆ ಸೃಷ್ಟಿಸಿದೆ.

Latest Indian news

Popular Stories