ಮಾಲಿವುಡ್ನಲ್ಲಿ “ಕುರುಪ್” ಅಬ್ಬರ

  • ಎಂ. ಎ ಮಂಗಳೂರು

ಎಂಬತ್ತರ ದಶಕದಲ್ಲಿ ಕೇರಳ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ನಟೋರಿಯಸ್ ಕ್ರಿಮಿನಲ್ ಗೋಪಾಲ ಕೃಷ್ಣನ್ ಯಾನೆ ಸುಕುಮಾರ ಕುರುಪ್ ನ ಜೀವನ ಆಧಾರಿತ ಚಿತ್ರವಾಗಿದೆ ದುಲ್ಕರ್ ಸಲ್ಮಾನ್ ಅಭಿನಯದ, ಶ್ರೀನಾಥ್ ರಾಜೇಂದ್ರನ್ ನಿರ್ದೇಶನದ “ಕುರುಪ್”. ಮೂಲ ಕಥೆಯನ್ನು ಹೋಲುವ ಕಾಲ್ಪನಿಕ ಕ್ರೈಂ ಥ್ರಿಲ್ಲರ್ ಬಹುಭಾಷಾ ಚಿತ್ರ.

ಪರ್ಶಿಯಾದಲ್ಲಿ ತನ್ನ ಹೆಸರಿನಲ್ಲಿರುವ 8 ಲಕ್ಷದಷ್ಟು ಮೋತ್ತದ ಇನ್ಸುರೆನ್ಸ್ ನ್ನು ಪಡೆಯಲು ಸ್ವಂತ ಮರಣವನ್ನು ನಕಲಿಕರಿಸಲು ಚಾಕೊ (ಚಾರ್ಲಿ) ಎಂಬ ವ್ಯಕ್ತಿಯನ್ನು ಗೆಳೆಯರು ಮತ್ತು ಅಳಿಯಯನ ಸಹಾಯದಿಂದ ಕೊಲೆಮಾಡಿ ಕಾರಿನೊಳಗೆ ಸುಟ್ಟು ಹಾಕಿದನು. ಅವನ ಮೃತ ದೇಹವನ್ನು ತನ್ನದೇ ಮೃತದೇಹ ಎಂದು ಬಿಂಬಿಸಲು ಸಂಚು ರೂಪಿಸಿ ಅಧಿಕಾರಿಗಳು ಮತ್ತು ಪೊಲೀಸರನ್ನು ವಂಚಿಸಲು ಪ್ರಯತ್ನಿಸಿದನು. ಈ ಪ್ರಕರಣವನ್ನು ಕೊಲೆ ಎಂದು ಪತ್ತೆ ಹಚ್ಚಿದ ಪೊಲೀಸರು ಇತರ ಅಪರಾಧಿಗಳನ್ನು ಬಂಧಿಸುವಲ್ಲಿ ಸಫಲರಾದರೂ ಸುಕುಮಾರ ಕುರುಪ್ ನನ್ನು ಬೆನ್ನಟ್ಟಿ ಸುಸ್ಥಾದರು. ಹಲವು ನಕಲಿ ಹೆಸರಿನಲ್ಲಿ ಅಲ್ಲಲ್ಲಿ ಗುರುತಿಸಿಕೊಳ್ಳುತ್ತಾ ಕೇರಳಾ ಪೋಲೀಸ್ ಡಿಪಾರ್ಟ್‌ಮೆಂಟ್ ಗೆ ದೊಡ್ಡ ತಲೆನೋವಾದನು.

ಮುಂಬೈ, ಮದ್ರಾಸ್, ಕೊಚ್ಚಿ, ಭೋಪಾಲ್, ದುಬೈ, ಅಬುಧಾಬಿಯಲ್ಲಿ ಭೂಗತ ಜಗತ್ತಿನಲ್ಲಿದ್ದ ಸುಕುಮಾರನ್ ಬದುಕನ್ನು ಪ್ರೇಕ್ಷಕರಿಗೆ ಬಿಚ್ಚಿಡುವುದೇ ಇದು ಸಿನಿಮಾದ ಪ್ರಮುಖ ಸಸ್ಪೆನ್ಸ್.

ಭಾರತದಲ್ಲಿ ಇನ್ನೂ ಬಗೆಹರಿಯದ ನಿಗೂಢ ಕೊಲೆಯಲ್ಲಿ ಇದೂ ಒಂದು. 1984 ರಿಂದ ತಲೆಮರೆಸಿಕೊಂಡಿರುವ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸುಕುಮಾರ ಕುರುಪ್ ಮತ್ತೊಮ್ಮೆ ಕೇರಳದ ಮಾಧ್ಯಮದಲ್ಲಿ ಪ್ರಮುಖ ಚರ್ಚಾ ವಸ್ತುವಾಗಿದ್ದಾನೆ. ಥಿಯೇಟರ್ ಗಳಲ್ಲಿ ಹೊಸ ದಾಖಲೆ ನಿರ್ಮಿಸಿ ಅಬ್ಬರವೆಬ್ಬಿಸುತ್ತಿದ್ದಾನೆ.

ಕುರುಪ್, ನೊರು ಕೋಟಿ ದಾಟಿದರೂ ಪ್ರಚಾರದಂತ್ತೆ ಸಿನಿಮಾ ಗಂಭೀರವಾಗಿ ಮೂಡಿ ಬರಲಿಲ್ಲ. ನಿಮಿಷ್ ರವಿಯವರ ಛಾಯಾಗ್ರಹಣ, ಶುಶಿನ್ ಶ್ಯಾಮ್ ರವರ ಸಂಗೀತ ಚೆನ್ನಾಗಿ ಮೂಡಿ ಬಂದಿದೆ.

ನಾಯಕ ನಟನಷ್ಟೇ ಡಿವೈಎಸ್ಪಿ ಕೃಷ್ಣ ದಾಸನಾಗಿ ಇಂದ್ರಜಿತ್ ಮತ್ತು ಪಿಳ್ಳೈಚ್ಚನ್ ಪಾತ್ರದ ಶೈನ್ ಟೋಮೋ ಚಾಕೋ, ಅಮೋಘವಾಗಿ ನಟಿಸಿದ್ದಾರೆ. ಶೋಭಿಯಾ ದುಲ್ಫಿಯಾ, ಟೊವಿನೋ ಥೋಮಸ್, ಸನ್ನೀ ವೈನೇ, ಪಿ ಬಾಲಚಂದ್ರ, ಮೂದಲಾದವರು ಪಾತ್ರಕ್ಕೆ ಹೋಂದುವಂತೆ ಅಭಿನಯಿಸಿದ್ದಾರೆ. ಕೊರೋನಾದಿಂದಾಗಿ ಚಿತ್ರಮಂದಿರ ಕಳೆದ ಒಂದೆರಡು ವರ್ಷಗಳಿಂದ ಮುಚ್ಚಿದ್ದು ಇದೀಗ “ಕುರುಪ್” ನ ಅಬ್ಬರದಿಂದಾಗಿ ಸಿನಿಮಾ ಉದ್ಯಮಕ್ಕೆ ಮತ್ತೆ ಜೀವ ಬಂದಂತಾಗಿದೆ.

Latest Indian news

Popular Stories

error: Content is protected !!