ಬಾಲಿವುಡ್ ನ ಫಿಟೆಸ್ಟ್ ನಟರಲ್ಲಿ ಹೃತಿಕ್ ರೋಷನ್ ಅವರನ್ನು ಒಬ್ಬರು ಎಂದು ಪರಿಗಣಿಸಲಾಗಿದೆ. ಇದೀಗ ಫಿಟೆಸ್ಟ್ ನಟ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಹೃತಿಕ್ ತಮ್ಮ ಫಿಟ್ನೆಸ್ ತರಬೇತುದಾರ ಕ್ರಿಸ್ ಗೆಥಿನ್ ಅವರೊಂದಿಗಿನ ಸಂಭಾಷಣೆಯಲ್ಲಿ ‘ವಾರ್’ ಚಿತ್ರದ ಶೂಟಿಂಗ್ ಸಮಯದಲ್ಲಿ ತಮ್ಮ ದೇಹದ ರೂಪಾಂತರ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದರು. ಆ ಸಂದರ್ಭದಲ್ಲಿ ತಾವು ಒತ್ತಡದಿಂದ ಬಳಲುತ್ತಿದ್ದುದ್ದಾಗಿ ಎಂದು ಹೇಳಿದರು.
ಹೃತಿಕ್ ರೋಷನ್ ತಮ್ಮ ‘ವಾರ್’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 2019ರಲ್ಲಿ ವಾರ್ ಸಿನಿಮಾದ ಚಿತ್ರೀಕರಣದ ವೇಳೆ ತಾನು ಸಾಯುತ್ತಿರುವಂತೆ ಭಾಸವಾಗುತ್ತಿತ್ತು ಎಂದರು. ಈ ಸಮಯದಲ್ಲಿ ಅವರು ಬಹುತೇಕ ಖಿನ್ನತೆಯ ಅಂಚಿಗೆ ತಲುಪಿರುವುದಾಗಿ ಭಾಸವಾಗುತ್ತಿತ್ತು ಎಂದು ಹೇಳಿದ್ದಾರೆ. ಈ ಚಿತ್ರದ ಚಿತ್ರೀಕರಣ ಮತ್ತು ತಯಾರಿ ನಮಗೆ ಅತ್ಯಂತ ಸವಾಲಿನದಾಗಿತ್ತು ಎಂದಿದ್ದಾರೆ.
ಚಿತ್ರೀಕರಣದ ವೇಳೆ ನಾನು ಪರಿಪೂರ್ಣತೆಯನ್ನು ಹುಡುಕುತ್ತಿದ್ದೆ. ಅದಕ್ಕಾಗಿ ನಾನು ಸಿದ್ಧವಾಗಿರಲಿಲ್ಲ. ಮೂರ್ನಾಲ್ಕು ತಿಂಗಳು ನನಗೆ ತರಬೇತಿ ಪಡೆಯಲು ಸಾಧ್ಯವಾಗಲಿಲ್ಲ. ನನಗೆ ಸ್ವಲ್ಪವೂ ಹುಷಾರಿರಲಿಲ್ಲ ಎಂದು ಹೇಳಿದ್ದಾರೆ.
ನಟ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರ ಆಕ್ಷನ್-ಥ್ರಿಲ್ಲರ್ ಚಿತ್ರ ‘ವಾರ್’ ಅಕ್ಟೋಬರ್ 2019ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿ ಗಳಿಸಿತು. ಇದು ಹೃತಿಕ್ ರೋಷನ್ ಅವರ ಇಲ್ಲಿಯವರೆಗಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ.