ಚಿತ್ರಮಂದಿರ ಆರಂಭಕ್ಕೆ ಅನುಮತಿ ನೀಡಿದ ಸರಕಾರ

ಬೆಂಗಳೂರು : ರಾಜ್ಯ ಸರ್ಕಾರದಿಂದ ನಾಳೆಯಿಂದ ಶೇ.50ರಷ್ಟು ಸೀಟುಗಳ ಭರ್ತಿಯೊಂದಿಗೆ ಸಿನಿಮಾ ಮಂದಿರಗಳನ್ನು ತೆರೆಯೋದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಈ ಮೂಲಕ ಅನ್ ಲಾಕ್ 4.0 ಮಾರ್ಗಸೂಚಿಯಂತೆ ಹಲವು ತಿಂಗಳ ಬಳಿಕ ನಾಳೆಯಿಂದ ಚಿತ್ರಮಂದಿರಗಳು ತೆರೆಯಲಿವೆ. ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳ ಜಾರಿ ಕುರಿತಂತೆ ಮಹತ್ವದ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಿನಿಮಾ ಥಿಯೇಟರ್ ಗಳನ್ನು ಶೇ.50ರಷ್ಟು ಸೀಟುಗಳ ಭರ್ತಿಯೊಂದಿಗೆ ನಾಳೆಯಿಂದ ತೆರೆಯಲು ಅವಕಾಶ ನೀಡುವ ನಿರ್ಣಯ ಕೈಗೊಳ್ಳಲಾಯಿತು.
ನಾಳೆಯಿಂದ ನೈಟ್ ಕರ್ಪ್ಯೂನಲ್ಲೂ ಬದಲಾವಣೆ ಮಾಡಲಾಗಿದ್ದು. ರಾತ್ರಿ 10 ಗಂಟೆಯಿAದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ.
ಜುಲೈ 26ರಿಂದ ಪದವಿ ತರಗತಿಗಳನ್ನು ಆರಂಭಿಸಲೂ ಅವಕಾಶ ನೀಡಲಾಗಿದೆ. ಕಾಲೇಜು ತರಗತಿಗಳಿಗೆ ಹಾಜರಾಗುವಂತ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

Latest Indian news

Popular Stories