ಉಡುಪಿ ಹಿಜಾಬ್ ವಿವಾದ: ಯಾರದ್ದೋ ಕುಮ್ಮಕ್ಕಿನಿಂದ ಘಟನೆ ರಾಜಕೀಯಗೊಳಿಸಲಾಗುತ್ತಿದೆ – ಶಾಸಕ ರಘುಪತಿ ಭಟ್

ಉಡುಪಿ: ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶಿರವಸ್ತ್ರ ಧರಿಸಲು ನೀಡಬೇಕೆಂಬ ವಿದ್ಯಾರ್ಥಿನಿಯರ ಪ್ರತಿಭಟನೆ ವಿವಾದ ಸೃಷ್ಟಿಸಿದೆ. ಈಗಾಗಲೇ ಸಮಸ್ಯೆ ಬಗೆಹರಿಸಲು ಹಲವು ಸುತ್ತಿನ ಮಾತುಕತೆ ಕೂಡ ನಡೆಯುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ರಘುಪತಿ ಭಟ್, ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಉದ್ದೇಶಪೂರ್ವಕವಾಗಿ ಗೊಂದಲಗಳನ್ನು ಉಂಟು ಮಾಡಲಾಗುತ್ತಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.

ಹಿಜಬ್ ವಿವಾದ ವಿಚಾರಕ್ಕೆ ಸಂಬಂಧ ಪಟ್ಟಂತೆ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಯೂನಿಫಾರ್ಮ್‌ ಕಡ್ಡಾಯ ಇಲ್ಲ ಎಂಬ ಕಾನೂನಿದ್ದರೂ ಸರ್ಕಾರಿ ಪಿಯು ಕಾಲೇಜಿನಲ್ಲಿ 1985 ರಿಂದಲೂ ಸಮವಸ್ತ್ರ ಕಡ್ಡಾಯ ಎಂಬ ನಿಯಮವಿದೆ.

ಹಿಜಬ್ ಬೇಕೆಂದು ಈಗ ಹೀಗೆ ಒತ್ತಾಯ ಮಾಡುವವರು ಕಳೆದ ಒಂದೂವರೆ ವರ್ಷ ಹಿಂದೆ ಕಾಲೇಜು ಸಮವಸ್ತ್ರದಲ್ಲೇ ಕಾಲೇಜಿಗೆ ಬಂದಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಈ ಘಟನೆಯನ್ನು ರಾಜಕೀಯ ಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Latest Indian news

Popular Stories