ಕಲಿತು ಉದ್ಯೋಗ ದೊರಕಿದ ನಂತರ ಚಾರಿಟೇಬಲ್ ಟ್ರಸ್ಟ್ ಸಹಾಯವನ್ನು ಮರಳಿಸಿದ ವಿದ್ಯಾರ್ಥಿ

ಹೈದರಾಬಾದ್: ನಾವು ಸ್ವೀಕರಿಸಿದ್ದನ್ನು ಸಮಾಜಕ್ಕೆ ಮರಳಿ ನೀಡುವುದು, ನಾವು ಬದುಕುವ ಜೀವನಕ್ಕೆ ಅರ್ಥವನ್ನು ನೀಡುತ್ತದೆ. ಹೈದರಾಬಾದ್ ಝಕಾತ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ (HZCT) ಅಧ್ಯಕ್ಷ ಘಿಯಾಸುದ್ದೀನ್ ಬಾಬುಖಾನ್ ಅವರು ಪ್ರತಿಷ್ಠಿತ ಸಂಸ್ಥೆಯಲ್ಲಿ ಸ್ಥಾನ ಪಡೆದ ನಂತರ ವಿದ್ಯಾರ್ಥಿಯೊಬ್ಬರು ಟ್ರಸ್ಟ್‌ಗೆ ಕೃಪೆಯನ್ನು ಹಿಂದಿರುಗಿಸಿದ ಕುರಿತು ಅಚ್ಚರಿ ವ್ಯಕ್ತಪಡಿಸಿದರು.

ಮೊಹಮ್ಮದ್ ಕರಿಮುಲ್ಲಾ ಅವರಿಗೆ ಇಂಜಿನಿಯರಿಂಗ್ ಪೂರ್ಣಗೊಳಿಸಲು ಸಹಾಯ ಮಾಡಲು ನಾಲ್ಕು ವರ್ಷಗಳ ಕಾಲ ವಿದ್ಯಾರ್ಥಿವೇತನವನ್ನು ಒದಗಿಸಿತು. ಕರೀಮುಲ್ಲಾ ಅವರು DBS ಬ್ಯಾಂಕ್ ಲಿಮಿಟೆಡ್‌ನಲ್ಲಿ ಕೆಲಸಕ್ಕೆ ಸೇರಿದರು. ವಾರ್ಷಿಕ 16 ಲಕ್ಷ ರೂ. ಪ್ಯಾಕೇಜ್ ದೊರಕಿತ್ತು. ಇಂದು ಕರೀಮುಲ್ಲಾ ಅವರು ಟ್ರಸ್ಟ್‌ಗೆ ಉಡುಗೊರೆಯ ರೂಪದಲ್ಲಿ ಹಣವನ್ನು ಹಿಂದಿರುಗಿಸಿದ್ದಾರೆ.

ಹೈದರಾಬಾದ್ ಝಕಾತ್ ಚಾರಿಟೇಬಲ್ ಟ್ರಸ್ಟ್ ಅನ್ನು 1993 ರಲ್ಲಿ ಸ್ಥಾಪಿಸಲಾಯಿತು, ಸಮಾಜದ ಅರ್ಥಿಕವಾಗಿ ಹಿಂದುಳಿದ ಸ್ತರಗಳಿಗೆ ಶಿಕ್ಷಣಕ್ಕೆ ಸಹಾಯ ನೀಡುವ ಮೂಲಕ ಹೆಸರುವಾಸಿಯಾಗಿದೆ.

Latest Indian news

Popular Stories