ಕ್ರೂಸ್ ರೈಡ್ ಪ್ರಕರಣ: ಕೇವಲ ಮೊಬೈಲ್ ಫೋನಿನ ಸಂಭಾಷಣೆಯ ಸಾಕ್ಷ್ಯ ಸಾಕಾಗುವುದಿಲ್ಲ ಎಂದ ನ್ಯಾಯಾಲಯ

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ರೂಸ್ ಶಿಪ್ ಡ್ರಗ್ ದಾಳಿ ಪ್ರಕರಣದಲ್ಲಿ ಬಂಧಿತರಾಗಿರುವ 22 ವರ್ಷದ ಆಚಿತ್ ಕುಮಾರ್‌ಗೆ ಜಾಮೀನು ನೀಡುವ ವಿವರವಾದ ಆದೇಶದಲ್ಲಿ ವಿಶೇಷ ನ್ಯಾಯಾಲಯವು ಕೇವಲ ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ಆತನನ್ನು ಡ್ರಗ್ ಸಪ್ಲೈಯರ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿತು.

ಎನ್.ಸಿ.ಬಿ ಆರೋಪಿಯು ಡ್ರಗ್ಸ್ ನ್ನು ನೀಡುತ್ತಿದ್ದ ಕುರಿತು ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡುವಲ್ಲಿ ವಿಫಲವಾಗಿದೆ. ಕೇವಲ ವಾಟ್ಸಪ್ ಚಾಟ್ ನ ಹೊರತಾಗಿ ಆರೋಪಿ ಆರ್ಯನ್ ಖಾನ್’ಗೆ ಮಾದಕ ವಸ್ತು ಪೂರೈಸಿದ್ದಾರೆಂಬುದಕ್ಕೆ ಬೇರೆ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವಿಶೇಷ ನ್ಯಾಯಾಲಯವು ಶನಿವಾರ ಈ ಪ್ರಕರಣದ ಒಂಭತ್ತು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಕ್ರೂಸ್ ಪಾರ್ಟಿಯಲ್ಲಿ ಡ್ರಗ್ ಬಳಕೆ ಮತ್ತು ಪೂರೈಕೆಯ ಆರೋಪದಲ್ಲಿ ಶಾರೂಕ್ ಖಾನ್ ಮಗ ಆರ್ಯನ್ ಖಾನ್ ಸೇರಿದಂತೆ ಹಲವಾರು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಆರ್ಯನ್ ಖಾನ್ ಮತ್ತು ಇತರ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈತನ್ಮಧ್ಯೆ ಎನ್.ಸಿ.ಬಿ ಅಧಿಕಾರಿ ಸಮೀರ್ ವಾಂಖೆಡೆ ಮತ್ತು ಸಚಿವ ನವಾಬ್ ಮಲಿಕ್ ನಡುವೆ ಹಲವು ಆರೋಪ ಪ್ರತ್ಯಾರೋಪಗಳ ರಾಜಕೀಯ ಕೂಡ ಸದ್ದು ಮಾಡುತ್ತಿದೆ.

Latest Indian news

Popular Stories