ಗುರ್ಗಾಂವ್: ನಮಾಝ್’ಗೆ ಅಡ್ಡಿ ಪಡಿಸಲು ಬಂದ ಮೂವತ್ತು ಮಂದಿಯ ಬಂಧನ

ನವ ದೆಹಲಿ:ಗುರ್ಗಾಂವ್ ಪ್ರದೇಶದಲ್ಲಿ ನಮಾಜ್ (ಅಥವಾ ದೈನಂದಿನ ಪ್ರಾರ್ಥನೆ) ನಿರ್ವಹಿಸುತ್ತಿದ್ದನ್ನು ವಿರೋಧಿಸಿ ಮತ್ತೆ ಕೆಲವು ಹಿಂದುತ್ವವಾದಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವತ್ತು ಜನರನ್ನು ವಶಕ್ಕೆ ಪಡೆಯಲಾಗಿದೆ.

ಪ್ರಾರ್ಥನೆಯ ವಿರುದ್ಧ ಘೋಷಣೆಗಳನ್ನು ಕೂಗಿದ ದುಷ್ಕರ್ಮಿಗಳು ಶಾಂತಿಭಂಗ ಮಾಡಲು ಯತ್ನಿಸಿದ ಕುರಿತು ವರದಿಯಾಗಿದೆ. “ಗುರ್ಗಾಂವ್ ಆಡಳಿತ, ನಿಮ್ಮ ನಿದ್ರೆಯಿಂದ ಎದ್ದೇಳಿ” ಎಂಬ ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

ಸೆಕ್ಟರ್ 12-ಎಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸರನ್ನು ನಿಯೋಜಿಸಲಾಗಿದೆ. ಸುಮಾರು 30 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಸೆಕ್ಟರ್ 12-ಎ ಮತ್ತು 47 ರಲ್ಲಿ ತೀವ್ರ ಪ್ರತಿಭಟನೆಗಳ ನಂತರ, ಪೊಲೀಸರು ಇಂದು ತ್ವರಿತವಾಗಿ ಕಾರ್ಯನಿರ್ವಹಿಸಿದ್ದಾರೆ.

“ಇಲ್ಲಿ ಎಲ್ಲವೂ ಶಾಂತಿಯುತವಾಗಿದೆ. ನಮಾಜ್‌ಗೆ ಅಡ್ಡಿಪಡಿಸಲು ಬಂದವರನ್ನು ನಾವು ಬಂಧಿಸಿದ್ದೇವೆ. ಕಳೆದ ಕೆಲವು ವಾರಗಳಿಂದ ನಾವು ಅವರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದೇವೆ (ಆದರೆ) ಇಂದು ತ್ವರಿತ ಕ್ರಮ ಕೈಗೊಂಡಿದ್ದೇವೆ” ಎಂದು ಗುರ್ಗಾಂವ್ ಎಸ್‌ಡಿಎಂ ಅನಿತಾ ಚೌಧರಿ ಎನ್‌ಡಿಟಿವಿಗೆ ತಿಳಿಸಿದರು.

Latest Indian news

Popular Stories