ಟಿ20 ನಾಯಕತ್ವವನ್ನು ತೊರೆಯದಂತೆ ವಿರಾಟ್ ಗೆ ಮನವಿ ಮಾಡಿದ್ದೆ: ಆಯ್ಕೆ ಸಮಿತಿ ಮುಖ್ಯಸ್ಥ

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ಅವರಿಗೆ ಏಕದಿನ ತಂಡದ ನಾಯಕತ್ವ ವಹಿಸಲಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಕ್ಕಿಳಿಸಿಲಾಗಿತ್ತು. ಅವರ ಬದಲಿಗೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಗಾಯದ ಕಾರಣದಿಂದ ರೋಹಿತ್ ಆಫ್ರಿಕಾ ಸರಣಿಗೆ ಅಲಭ್ಯರಾಗಿದ್ದಾರೆ.

ವಿರಾಟ್ ನಾಯಕತ್ವ ಪದಚ್ಯುತಿಯ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಮೊದಲ ಬಾರಿಗೆ ಮಾತನಾಡಿದ್ದಾರೆ. “ಟಿ 20 ವಿಶ್ವಕಪ್ ಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಆರಂಭವಾದಾಗ ಕೊಹ್ಲಿಯ ನಿರ್ಧಾರ ನಮಗೆ ಅಚ್ಚರಿ ತಂದಿತ್ತು. ವಿಶ್ವಕಪ್ ಗೆ ಕೆಲವೇ ದಿನಗಳು ಬಾಕಿ ಇರುವಂತೆ ವಿರಾಟ್ ನಿರ್ಧಾರ ನಮಗೆ ಆಶ್ಚರ್ಯ ತಂದಿತ್ತು” ಎಂದಿದ್ದಾರೆ.

ಸಭೆಯಲ್ಲಿ ಇದ್ದವರೆಲ್ಲಾ ನಿರ್ಧಾರ ಮರುಪರಿಶೀಲಿಸುವಂತೆ ವಿರಾಟ್ ಗೆ ಮನವಿ ಮಾಡಿದ್ದೆವು. ವಿರಾಟ್ ನಿರ್ಧಾರದಿಂದ ವಿಶ್ವಕಪ್ ಗೆ ಪರಿಣಾಮ ಬೀರಬಹುದು ಎಂದು ಎಲ್ಲಾ ಆಯ್ಕೆದಾರರು ಅಂದುಕೊಂಡಿದ್ದರು, ಪಂದ್ಯಾವಳಿಯ ನಂತರ ಇದನ್ನು ನಿಭಾಯಿಸಬಹುದೆಂದು ಎಲ್ಲಾ ಆಯ್ಕೆದಾರರು ಭಾವಿಸಿದ್ದರು” ಎಂದು ಶರ್ಮಾ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ಗಾಗಿ ನಾಯಕನಾಗಿ ಮುಂದುವರಿಯಲು ಸಭೆಯಲ್ಲಿದ್ದ ಎಲ್ಲರೂ ವಿರಾಟ್‌ ಗೆ ಹೇಳಿದ್ದರು” ಎಂದು ಚೇತನ್ ಶರ್ಮಾ ಹೇಳಿದರು.

Latest Indian news

Popular Stories