ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಗೆ  44 ಲಕ್ಷ ರೂ. ವಂಚನೆ!

ಮುಂಬೈ: ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್  ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಜಮೀನು ಖರೀದಿಸುವ ನೆಪದಲ್ಲಿ ತನ್ನ ಸ್ನೇಹಿತನಿಂದಲೇ ವಂಚನೆಗೊಳಗಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ತನ್ನ ಮ್ಯಾನೇಜರ್ ಕೂಡಾ ಆಗಿದ್ದ ಸ್ನೇಹಿತನಿಂದ 44 ಲಕ್ಷ ರೂಪಾಯಿಯನ್ನು ಉಮೇಶ್ ಯಾದವ್ ಕಳೆದುಕೊಂಡಿದ್ದಾರೆ.

ಈ ಸಂಬಂಧ  ಶೈಲೇಸ್ ಠಾಕ್ರೆ ವಿರುದ್ಧ ಉಮೇಶ್ ಯಾದವ್ ನೀಡಿದ ದೂರಿನ ವಂಚನೆ ದೂರಿನ ಆಧಾರದ ಮೇಲೆ  ಕೇಸ್ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆದರೆ, ಇನ್ನೂ ಯಾವುದೇ ಬಂಧನವಾಗಿಲ್ಲ. ಜುಲೈ 15, 2014 ರಂದು ಉಮೇಶ್ ಯಾದವ್ ಟೀಂ ಇಂಡಿಯಾ ಸದಸ್ಯರಾಗಿ ಆಯ್ಕೆಯಾದ ನಂತರ ನಿರುದ್ಯೋಗಿಯಾಗಿದ್ದ ತನ್ನ ಸ್ನೇಹಿತ ಠಾಕ್ರೆಯನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದಾಗಿ  ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಕಾಲಕ್ರಮೇಣ ಯಾದವ್ ವಿಶ್ವಾಸ ಗಳಿಸಿದ್ದು, ಉಮೇಶ್ ಯಾದವ್ ಅವರ  ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸಲು ಪ್ರಾರಂಭಿಸಿದ್ದು, ಬ್ಯಾಂಕ್ ಖಾತೆ, ಆದಾಯ ತೆರಿಗೆ ಮತ್ತು ಇತರ ಹಣಕಾಸು ಕಾರ್ಯಗಳನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಉಮೇಶ್ ಯಾದವ್ ಅವರ ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದ್ದ ಶೈಲೇಶ್ ಠಾಕ್ರೆ ನಾಗ್ಪುರದಲ್ಲಿ ಒಂದು ಖಾಲಿ ಜಮೀನು ಮಾರಾಟಕ್ಕಿದ್ದು, 44 ಲಕ್ಷ ರೂ.ಗೆ ಸಿಗುತ್ತದೆ ಎಂದು ಉಮೇಶ್ ಯಾದವ್ ಅವರಿಗೆ ತಿಳಿಸಿದ್ದು, ಅವರ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾರೆ.

ನಂತರ ಶೈಲೇಶ್ ಠಾಕ್ರೆ ನಿವೇಶನವನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ. ಬಳಿಕ ನಿವೇಶನ ಹಿಂತಿರುಗಿಸಲು ನಿರಾಕರಿಸಿದ್ದಾರೆ.  ಹೀಗಾಗಿ ಉಮೇಶ್ ಯಾದವ್ ಠಾಕ್ರೆ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

Latest Indian news

Popular Stories