ದೆಹಲಿಯಲ್ಲಿ ಮಾಂಸಾಹಾರಿ ಆಹಾರ ಸಾಗಿಸಿದ ಮುಸ್ಲಿಂ ವ್ಯಕ್ತಿಯನ್ನು ಬಸ್‌ನಿಂದ ಇಳಿಸಿದ ನಿರ್ವಾಹಕ – ವಿವಾದ!

ದೆಹಲಿ: ಮುಸ್ಲಿಂ ವ್ಯಕ್ತಿಯೊಬ್ಬರು ಬ್ಯಾಗ್‌ನಲ್ಲಿ ಮಾಂಸಾಹಾರಿ ಆಹಾರವನ್ನು ಸಾಗಿಸುತ್ತಿದ್ದಾರೆ ಎಂದು ಕಂಡಕ್ಟರ್‌ಗೆ ತಿಳಿದಾಗ ಅವರನ್ನು ಬಸ್‌ನಿಂದ ಇಳಿಸಿದ್ದಾರೆ.

ನಿಜಾಮುದ್ದೀನ್ ಪ್ರದೇಶದಲ್ಲಿ ಕೆಲಸ ಮಾಡುವ ಇಮ್ರಾನ್ ಅವರು ‘ನಾನ್ ವೆಜ್ ಫುಡ್’ ಪ್ಯಾಕ್ ಮಾಡಿದ ನಂತರ ದೆಹಲಿಯ ನಿಜಾಮುದ್ದೀನ್‌ನ ಶಿವಮಂದಿರ ಬಸ್ ನಿಲ್ದಾಣದಿಂದ ಡಿಟಿಸಿಯ ಬಸ್ ಸಂಖ್ಯೆ 410 ಅನ್ನು ಹತ್ತಿದ್ದರು. ಬಸ್ಸಿನ ಮಹಿಳಾ ಕಂಡಕ್ಟರ್ ಬ್ಯಾಗ್‌ನಲ್ಲಿ ಏನಿದೆ ಎಂದು ಕೇಳಿದರು. ಆದರೆ ಅವರು ಮಾಂಸಾಹಾರಿ ಆಹಾರಿದೆ ಎಂದು ಸ್ಪಷ್ಟವಾಗಿ ಹೇಳಿದರು. ಈ ಸಮಯದಲ್ಲಿ ಅವರನ್ನು ಬಸ್‌ನಿಂದ ಇಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಲಜಪತ್ ನಗರ್ ಜಲ ವಿಹಾರ್ ನಿವಾಸಿ ಇಮ್ರಾನ್ ಬಸ್ ಹತ್ತುವಾಗ ಕೋಳಿಯನ್ನು ತನ್ನೊಂದಿಗೆ ಕೊಂಡೊಯ್ಯುತ್ತಿದ್ದ ವೇಳೆ ಪಕ್ಷಪಾತದ ಬಗ್ಗೆ ಮಾತನಾಡುತ್ತಿದ್ದಾರೆ. ನಾನ್ ವೆಜ್ ಫುಡ್ ಕೊಂಡೊಯ್ದರೆ ಬಸ್ ಹತ್ತುವಂತಿಲ್ಲ ಎಂದು ಎಲ್ಲಿ ಬರೆದಿದ್ದಾರೆ ಹೇಳು ಎಂದು ಕೇಳಿದರು.

ನಾನ್ ವೆಜ್ ಕೊಂಡೊಯ್ಯುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ತಾರತಮ್ಯದಿಂದ ಇಳಿಸಿದ ಬಸ್ ಚಾಲಕ ಮತ್ತು ಕಂಡಕ್ಟರ್ ವಿರುದ್ಧ ದೆಹಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಡಿಯೋದಲ್ಲಿ ಒತ್ತಾಯಿಸಲಾಗಿದೆ.

Latest Indian news

Popular Stories