ದೆಹಲಿ ಮತ್ತೆ ಕಟ್ಟಡ ನಿರ್ಮಾಣ ನಿಷೇಧಿಸಿದ ಸುಪ್ರೀಮ್ ಕೋರ್ಟ್

ನವದೆಹಲಿ: ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನಿಸಿದ ಸುಪ್ರೀಂ ಕೋರ್ಟ್ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಮತ್ತೆ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧ ವಿಧಿಸಿದೆ ಮತ್ತು ಈ ಅವಧಿಗೆ ಕಾರ್ಮಿಕ ಸೆಸ್‌ನಂತೆ ಸಂಗ್ರಹಿಸಲಾದ ನಿಧಿಯಿಂದ ಸಂತ್ರಸ್ತ ಕಾರ್ಮಿಕರಿಗೆ ಜೀವನಾಧಾರ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ವಿಶೇಷ ಪೀಠ, ಬುಧವಾರ ರಾತ್ರಿ ಅಪ್‌ಲೋಡ್ ಮಾಡಿದ ಮಧ್ಯಂತರ ಆದೇಶದಲ್ಲಿ, ಮಧ್ಯಂತರ ಕ್ರಮವಾಗಿ ಮತ್ತು ಮುಂದಿನ ಆದೇಶದವರೆ, ನಾವು ಈ ಕೆಳಗಿನ ಎರಡು ಷರತ್ತುಗಳಿಗೆ ಒಳಪಟ್ಟು ಎನ್‌ಸಿಆರ್‌ನಲ್ಲಿನ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧವನ್ನು ಪುನಃ ವಿಧಿಸುತ್ತೇವೆ ಎಂದು ತಿಳಿಸಲಾಗಿದೆ.

ಕೊಳಾಯಿ ಕೆಲಸ, ಒಳಾಂಗಣ ಅಲಂಕಾರ, ವಿದ್ಯುತ್ ಕೆಲಸ ಮತ್ತು ಮರದ ಕೆಲಸದಿಂದ ಕೂಡಿದ ಮಾಲಿನ್ಯರಹಿತ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಸೆಸ್‌ನಂತೆ ಸಂಗ್ರಹಿಸಿದ ಹಣವನ್ನು ರಾಜ್ಯಗಳು ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸುವ ಅವಧಿಗೆ ಜೀವನಾಧಾರವನ್ನು ಒದಗಿಸಲು ಮತ್ತು ಆಯಾ ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಸೂಚಿಸಲಾದ ವೇತನ ಪಾವತಿಸಲು ಬಳಸಬೇಕು ಎಂದು ಸೂಚಿಸಿದೆ.

ದೆಹಲಿಯಲ್ಲಿ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ಸೋಮವಾರ ದೆಹಲಿ ಸರ್ಕಾರ ನಿರ್ಮಾಣ ಮತ್ತು ನೆಲಸಮ ಮಾಡುವ ಚಟುವಟಿಕೆಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಮತ್ತೆ ನಿಷೇಧ ಹೇರಿದೆ.

Latest Indian news

Popular Stories