ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಶೃಂಗೇರಿ ಶಾರದಾ ಮಠದ ಕುರಿತು ಉಲ್ಲೇಖಿಸಿ ಹೈದರಾಲಿ, ಟಿಪ್ಪುವನ್ನು ಪ್ರಶಂಸೆ ಮಾಡಿದ ದೇವೇಗೌಡ್ರು

ಬೆಂಗಳೂರು: ಕೇದರನಾಥನಲ್ಲಿ ಶಂಕರಾಚಾರ್ಯರ ಪ್ರತಿಮೆ ಉದ್ಘಾಟಿಸಿದ ಕುರಿತು ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಶೃಂಗೇರಿಯ ಶಾರದ ಮಠವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ನಾನು ಕೇದಾರನಾಥದಲ್ಲಿರುವ ಹೊಸ ಶಂಕರಾಚಾರ್ಯರ ಪ್ರತಿಮೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಮತ್ತು ಮಹಾನ್ ಸಂತರಿಂದ ಸ್ಥಾಪಿಸಲ್ಪಟ್ಟ ಕರ್ನಾಟಕದ ಶೃಂಗೇರಿ ಶಾರದ ಪೀಠವು ನನಗೆ ಯಾವತ್ತೂ ಸರ್ವಧರ್ಮ ಸೌಹಾರ್ದತೆಯ ಅತ್ಯಾಧುನಿಕ ಸಂಕೇತವಾಗಿದೆ” ಎಂದು ಉಲ್ಲೇಖಿಸಿದ್ದಾರೆ.

ಅದರಲ್ಲಿ ಶಾರದ ಮಠದ ಕುರಿತು ಟಿಪ್ಪು, ಹೈದರಾಲಿ ಮತ್ತು ಹೈದರಾಬಾದ್ ನಿಝಾಮರಿಗಿದ್ದ ಶ್ರದ್ಧೆಯನ್ನು ಪತ್ರದಲ್ಲಿ ಉಲ್ಲೇಖಿಸಿ ಶಾರದ ಪೀಠವು ಸೌಹರ್ದತೆಯ ಸಂಕೇತವಾಗಿದೆಯೆಂದು ಹೇಳಿದ್ದಾರೆ.

ಇದೀಗ ಅವರ ಪತ್ರಕ್ಕೆ ಟ್ವೀಟರ್ ನಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ. ಕೆಲವರು ಟಿಪ್ಪು,ಹೈದರಾಲಿ ಕುರಿತ ಉಲ್ಲೇಖಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅವರ ನಡೆಯನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.

Latest Indian news

Popular Stories