ಪ್ರಧಾನಿ ಮೋದಿ 4 ಗಂಟೆಯ ಕಾರ್ಯಕ್ರಮಕ್ಕೆ 23 ಕೋಟಿ ರೂ ಖರ್ಚು ಮಾಡುತ್ತಿದೆ ಮ.ಪ್ರದೇಶ ಸರ್ಕಾರ!

ಭೋಪಾಲ್: ಮಧ್ಯಪ್ರದೇಶ ತನ್ನ ಬುಡಕಟ್ಟು ಜನರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಭೋಪಾಲ್‌ ಗೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಭೋಪಾಲ್ ನಲ್ಲಿ ನಾಲ್ಕು ಗಂಟೆಗಳ ಕಾಲ ಮತ್ತು ವೇದಿಕೆಯಲ್ಲಿ 1 ಗಂಟೆ 15 ನಿಮಿಷಗಳ ಕಾಲ ಇರುತ್ತಾರೆ, ಇದಕ್ಕಾಗಿ ಐದು ಗುಮ್ಮಟಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ 23 ಕೋಟಿ ರೂ. ಗೂ ಹೆಚ್ಚು ವೆಚ್ಚ ಮಾಡುತ್ತಿದ್ದು, ಈ ಪೈಕಿ 13 ಕೋಟಿ ರೂ. ಜಾಂಬೂರಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜನರನ್ನು ಸಾಗಿಸಲು ವೆಚ್ಚ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಭಗವಾನ್ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ಮಧ್ಯಪ್ರದೇಶವು ನವೆಂಬರ್ 15 ರಂದು ಜಂಜಾಟಿಯ ಗೌರವ್ ದಿವಸ್ ಅನ್ನು ಆಚರಿಸಲಿದೆ. ಪ್ರಧಾನಿ ಮೋದಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಗರದ ಜಂಬೂರಿ ಮೈದಾನದಲ್ಲಿ ದೇಶದ ಮೊದಲ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಜಂಜಾಟಿಯ ಗೌರವ್ ದಿವಸ್‌ನ ಅಂಗವಾಗಿ, ಬಿರ್ಸಾ ಮುಂಡಾ ಮತ್ತು ಇತರ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಸ್ಮರಿಸಲು ನವೆಂಬರ್ 15 ರಿಂದ 22 ರವರೆಗೆ ರಾಷ್ಟ್ರೀಯವಾಗಿ ಒಂದು ವಾರದ ಕಾರ್ಯಕ್ರಮಗಳನ್ನು ಆಯೋಜಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

ಜಾಂಬೂರಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಆದಿವಾಸಿಗಳು ಭಾಗವಹಿಸುವ ಸಾಧ್ಯತೆಯಿದೆ, ಇಡೀ ಮೈದಾನವನ್ನು ಬುಡಕಟ್ಟು ಕಲೆ ಮತ್ತು ಬುಡಕಟ್ಟು ದಿಗ್ಗಜರ ಚಿತ್ರಗಳಿಂದ ಅಲಂಕರಿಸಲಾಗಿದೆ. ಒಂದು ವಾರದಿಂದ 300ಕ್ಕೂ ಹೆಚ್ಚು ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿದ್ದಾರೆ.

Latest Indian news

Popular Stories