ಬಿಜೆಪಿಯನ್ನು ಸೋಲಿಸುವ ಘೋಷಣೆಯೊಂದಿಗೆ ಉತ್ತರಪ್ರದೇಶ ಮತದಾರರ ಬಳಿಗೆ ಹೋಗುತ್ತೇವೆ – ರಾಕೇಶ್ ಟಿಕಾಯತ್

ಹೈದರಾಬಾದ್: “ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯಾವಾಗಲೂ ನಮ್ಮ ಪ್ರಮುಖ ವಿಚಾರವಾಗಿದೆ. ನಾವು ಬಿಜೆಪಿಯನ್ನು ಸೋಲಿಸುವ ಘೋಷಣೆಯೊಂದಿಗೆ ಉತ್ತರಪ್ರದೇಶ ಮತದಾರರ ಬಳಿಗೆ ಹೋಗುತ್ತೇವೆ. ಮಾದರಿ ನೀತಿ ಸಂಹಿತೆ (ಎಂಸಿಸಿ) ಅನ್ವಯವಾಗುವ ಮೊದಲು ಭಾರತ ಸರಕಾರ ಹಾಗೂ ಪ್ರಧಾನಿ ಮೋದಿ ಸಮಸ್ಯೆಯನ್ನು ಪರಿಹರಿಸಿದರೆ ಅದು ಉತ್ತಮವಾಗಿರುತ್ತದೆ” ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಗುರುವಾರ ಹೇಳಿದ್ದಾರೆ.

ಒಂದು ವರ್ಷದಿಂದ ದಿಲ್ಲಿಯ ಗಾಝಿಪುರ ಗಡಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಟಿಕಾಯತ್ ಮುನ್ನಡೆಸುತ್ತಿದ್ದಾರೆ.

ಗುರುವಾರ ಹೈದರಾಬಾದ್‌ನಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, ರೈತರಿಗೆ ಎಂಎಸ್‌ಪಿ ಸಹಾಯ ಮಾಡುತ್ತದೆ. ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಮುನ್ನಡೆಸುವ ಸುಮಾರು 40 ರೈತರ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾಕ್ಕೆ ಎಂಎಸ್‌ಪಿ ಯಾವಾಗಲೂ ಒಂದು ಮುಖ್ಯ ವಿಚಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

“‘ಕೇಂದ್ರದೊಂದಿಗೆ ನಡೆಸಿರುವ ಎಲ್ಲ 11 ಸುತ್ತಿನ ಮಾತುಕತೆಯ ವೇಳೆಯೂ ನಾವು ಎಂಎಸ್‌ಪಿ ಕುರಿತು ಚರ್ಚಿಸಿದ್ದೇವೆ. ನಾವು ಅದರಿಂದ ಹಿಂದೆ ಸರಿಯುವುದಿಲ್ಲ. ಸರಕಾರವು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಹಾಗೂ ಮಾತುಕತೆಗಳನ್ನು ಪ್ರಾರಂಭಿಸಬೇಕು”ಎಂದರು.

ಬಿಕೆಯು ಬೆಂಬಲಿಗರು ಇನ್ನೂ ದಿಲ್ಲಿ ಗಡಿಯಲ್ಲಿನ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಟಿಕಾಯತ್ ಹೇಳಿದರು.

ಬಿಜೆಪಿಯನ್ನು ಸೋಲಿಸುವುದು ಎಸ್‌ಕೆಎಂ ತಂತ್ರವಾಗಿದೆ ಎಂದು ಟಿಕಾಯತ್ ಹೇಳಿದರು.

“ಅವರು ಹಳ್ಳಿಗಳಲ್ಲಿ ಬಹಿಷ್ಕಾರವನ್ನು ಎದುರಿಸುತ್ತಾರೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಚುನಾವಣೆಯ ಸಮಯದಲ್ಲಿ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ. ಇದು ಈಗಾಗಲೇ ಪಶ್ಚಿಮ ಯುಪಿಯಲ್ಲಿ ಪ್ರಾರಂಭವಾಗಿದೆ” ಎಂದು ಅವರು ಹೇಳಿದರು.

Latest Indian news

Popular Stories