ಶಾಹಿನ್ ಅಫ್ರಿದಿ ಮತ್ತು ಬುಮ್ರಾ ಹೋಲಿಕೆ ಮೂರ್ಖತನ – ಅಮೀರ್

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಕೂಟದ ಸೂಪರ್ 12 ಹಂತ ಇಂದಿನಿಂದ ಆರಂಭವಾಗುತ್ತಿದೆ. ಇಂದಿನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ತಂಡಗಳು ಸೆಣಸಾಡಿದರೆ, ಎರಡನೇ ಪಂದ್ಯವು ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ರವಿವಾರ ಭಾರತ ಮತ್ತು ಪಾಕಿಸ್ಥಾನ ನಡುವೆ ಹೈವೋಲ್ಟೇಜ್ ಸಮರ ನಡೆಯಲಿದೆ.

ಪಂದ್ಯಕ್ಕೂ ಮೊದಲು ಹಲವು ಚರ್ಚೆಗಳಾಗಿತ್ತಿದೆ. ಈ ಬಗ್ಗೆ ಮಾತನಾಡಿದ ಪಾಕ್ ಮಾಜಿ ವೇಗಿ ಮೊಹಮ್ಮದ್ ಆಮಿರ್, ಭಾರತದ ಜಸ್ಪ್ರೀತ್ ಬುಮ್ರಾ ಚುಟುಕು ಮಾದರಿ ಕ್ರಿಕೆಟ್ ನ ಶ್ರೆಷ್ಠ ಬೌಲರ್ ಎಂದಿದ್ದಾರೆ.

ಪಾಕಿಸ್ಥಾನದ ಯುವ ವೇಗಿ ಶಾಹಿನ್ ಅಫ್ರಿದಿ ಮತ್ತು ಬುಮ್ರಾ ನಡುವಿನ ಹೋಲಿಕೆಯನ್ನು ಆಮಿರ್ ಮೂರ್ಖತನ ಎಂದಿದ್ದಾರೆ. ಅಫ್ರಿದಿ ಸದ್ಯದ ಪಾಕಿಸ್ಥಾನದ ಅತ್ಯುತ್ತಮ ಬೌಲರ್ ಎಂದಿರುವ ಆಮಿರ್, “ಶಾಹಿನ್ ಇನ್ನೂ ಕಲಿಯುತ್ತಿದ್ದಾನೆ. ಆದರೆ ಬುಮ್ರಾ ಕೆಲವು ಕಾಲದಿಂದ ಭಾರತ ತಂಡಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾನೆ. ನನ್ನ ಪ್ರಕಾರ ಸದ್ಯ ಟಿ20 ಮಾದರಿಯಲ್ಲಿ ಆತ ಬೆಸ್ಟ್ ಬೌಲರ್” ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ಥಾನ ತಂಡಗಳು ಅ.24ರಂದು ತಮ್ಮ ಮೊದಲ ಪಂದ್ಯವಾಡುತ್ತಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

Latest Indian news

Popular Stories