‘ಸಿ.ಟಿ.ರವಿ ಇದ್ದಾನಲ್ಲಾ. ಅವನು ಕಮ್ಯುನಲ್ ಫೆಲ್ಲೋ..’: ಸಿದ್ದರಾಮಯ್ಯ ವಾಗ್ದಾಳಿ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಲೆ ಸುಲಿಗೆ ಜಾಸ್ತಿಯಾಗತ್ತದೆ ಎಂಬ ಮಾಜಿ ಸಚಿವ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ಸಿ.ಟಿ ರವಿ ಇದ್ದಾನಲ್ಲಾ ಅವನು ಕಮ್ಯುನಲ್ ಫೆಲ್ಲೋ. ಅವನಿಗೆಲ್ಲಾ ನಾನು ಉತ್ತರ ಕೊಡಲ್ಲ. ಹಿ ಇಸ್ ಏ ಮೋಸ್ಟ್ ಕಮ್ಯುನಲ್ ಫೆಲ್ಲೋ. ಅವರಿಗೆ ಜಾತ್ಯಾತೀತ ತತ್ವ ಅರ್ಥವಾಗಲ್ಲ. ಸಂವಿಧಾನ ಅವರಿಗೆ ಅರ್ಥವಾಗಲ್ಲ. ಅವನಿಗೆ ನಾನು ಉತ್ತರ ಕೊಡುತ್ತಾ ಕೂರಲ್ಲ” ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸ್ಫರ್ಧೆಗೆ ಬೇರೆ ಕ್ಷೇತ್ರಗಳಿಂದ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ‘’ಕರೆಯುತ್ತಿದ್ದಾರೆ. ನಾನೂ ಅರ್ಜಿ ಹಾಕಿದ್ದೇನೆ. ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಅವರೇ ಹೇಳಿದ ಜಾಗದಲ್ಲಿ ಸ್ಪರ್ಧೆ ಮಾಡುತ್ತೇನೆ’’ ಎಂದರು.

ಒಂದೇ ಕ್ಷೇತ್ರಕ್ಕೆ ಹಲವು ಜನರಿಂದ ಅರ್ಜಿ ವಿಚಾರವಾಗಿ ಸಾಮಾಜಿಕ ನ್ಯಾಯದ ಜೊತೆಗೆ ಗೆಲುವುನ್ನು ಪರಿಗಣನೆ ಮಾಡಬೇಕಾಗುತ್ತದೆ. ಕೋಮುವಾದಿ ಪಕ್ಷ, ಮನುವಾದಿ ಪಕ್ಷವನ್ನು ಕಿತ್ತು ಹಾಕಬೇಕು. ಇವರಿಂದ ದೇಶ ಮತ್ತು ರಾಜ್ಯ ಉಳಿಯುವುದಿಲ್ಲ. ಇದು ನಮ್ಮ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಟಿಕೆಟ್ ಯಾರಿಗೆ ಸಿಗುತ್ತದೆ ಸಿಗುವುದಿಲ್ಲ ಎನ್ನುವುದು ಪ್ರಶ್ನೆ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಟಿಕೆಟ್ ಕೊಟ್ಟ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದರು.

ಕೊಪ್ಪಳದಲ್ಲಿ ನಾನು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಮದುವೆ ಸಮಾರಂಭದಲ್ಲಿ ರಾಜಕೀಯ ಮಾತನಾಡಲು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಹೆಸರು ಹೇಳಿದ್ದೆ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

Latest Indian news

Popular Stories