ಅಂಬೇಡ್ಕರ್ ಝಿಂದಾಬಾದ್ ವೀಡಿಯೋ ತಿರುಚಿ ಪಾಕಿಸ್ತಾನ್ ಝಿಂದಾಬಾದ್ ಮಾಡಿದ ಪ್ರಕರಣದಲ್ಲಿ ಕೊಡಗಿನ ಪತ್ರಕರ್ತ ಸೇರಿ ಮೂರು ಮಂದಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು

ಕೊಡಗು: ಮುಸ್ಲಿಂ ಮಹಿಳೆಯರು ಕೊಡಗಿನ ಶನಿವಾರಸಂತೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸಿದಾಗ ಅಂಬೇಡ್ಕರ್ ಝಿಂದಾಬಾದ್ ಎಂದು ಕೂಗಿದ್ದರು. ಇದರ ವೀಡಿಯೋ ಎಡಿಟ್ ಮಾಡಿ ಪಾಕಿಸ್ತಾನ್ ಝಿಂದಾಬಾದ್ ಮಾಡಿ ಕೊಡಗಿನಲ್ಲಿ ಗಲಭೆ ಸೃಷ್ಟಿಸಲು ಹುನ್ನಾರ ನಡೆಸಿದ ಪ್ರಕರಣದಲ್ಲಿ ಶನಿವಾರಸಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

FB IMG 1637400334413 Featured Story, Crime, State News
FB IMG 1637400328022 Featured Story, Crime, State News

ಶನಿವಾರಸಂತೆಯ ಕನ್ನಡ ಪ್ರಭ ಪತ್ರಿಕೆಯ ವರದಿಗಾರ, ಸೋಮವಾರಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್,* ಮತ್ತು ಗ್ರಾಮ ಪಂಚಾಯತ್ ಸದಸ್ಯ ರಘು, ಹಾಗೂ ಗಿರೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ಬೆಂಬಲಿಗರಾದ ಹರೀಶ್ ಮತ್ತು ರಘು ಇಬ್ಬರ ಕುಮ್ಮಕ್ಕಿನಿಂದ ಗಿರೀಶ್ ತಿರುಚಿದ ವಿಡಿಯೋ ವೈರಲ್ ಮಾಡಿದ್ದಾನೆ ಎಂದು ಪೊಲೀಸ್ FIR ಹೇಳುತ್ತದೆ.

ಪಾಕಿಸ್ತಾನ್ ಪರ ಘೋಷಣೆ ಎಡಿಟ್ ಮಾಡಿ, ಸಮಾಜದಲ್ಲಿ ಕೋಮು ಗಲಭೆ ನಡೆಸಲು ಸುಳ್ಳು ಸುದ್ದಿ ಹರಡಿ, ಕೊಡಗಿನ ಶಾಂತಿಯನ್ನು ಕೆಡಿಸಲು ಷಡ್ಯಂತ್ರ ಮಾಡಿರುವ ಪತ್ರಕತ್ರರನ್ನು ಪೊಲೀಸರು ಇದೀಗ ಸಿಕ್ಕಿ ಬಿದ್ದಿದ್ದಾರೆ.

Latest Indian news

Popular Stories

error: Content is protected !!