ಅಣ್ಣಾ ಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತರಲ್ಲ – ಬಿಜೆಪಿ ತೊರೆದ ನಟಿ ಗಾಯತ್ರಿ ರಘುರಾಮ್

ತಮಿಳುನಾಡು: ಮಾಜಿ ಐ.ಪಿ.ಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸುತ್ತ ವಿವಾದ ಎದ್ದಿದ್ದು ಅಣ್ಣಾ ಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂದು ನಟಿ ಗಾಯತ್ರಿ ಬಿಜೆಪಿ ತೊರೆದಿದ್ದಾರೆ.

ಪಕ್ಷದಿಂದ ಅಮಾನತುಗೊಳಿಸಿದ ನಲವತ್ತು ದಿನಗಳ
ನಂತರ, ನಟಿ ಗಾಯತ್ರಿ ರಘುರಾಮ್ ಅವರು ಮಂಗಳವಾರ ತಮಿಳುನಾಡು ಬಿಜೆಪಿಯನ್ನು ತೊರೆದಿದ್ದಾರೆ. ಅವರ ಪಕ್ಷ ತ್ಯಜಿಸುವ ನಿರ್ಧಾರಕ್ಕೆ ರಾಜ್ಯ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಎಂದು ಆರೋಪಿಸಿದ್ದಾರೆ.

2014 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಗಾಯತ್ರಿ, ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದರು. ಅಣ್ಣಾಮಲೈ ಬೆಂಬಲಿಗರು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನವೆಂಬರ್ 22 ರಂದು ಡಿಎಂಕೆ ಸಂಸದ ತಿರುಚಿ ಶಿವ ಅವರ
ಪುತ್ರ ಸೂರ್ಯ ಶಿವ ಅವರನ್ನು ಸೇರ್ಪಡೆಗೊಳಿಸುವ
ಅಣ್ಣಾಮಲೈ ನಿರ್ಧಾರವನ್ನು ಸಾರ್ವಜನಿಕವಾಗಿ ಟೀಕಿಸಿದ
ನಂತರ ನಟಿ ಗಾಯತ್ರಿಯನ್ನು ಬಿಜೆಪಿಯಿಂದ
ಅಮಾನತುಗೊಳಿಸಲಾಯಿತು.

Latest Indian news

Popular Stories