ಅಣ್ಣ ನಿನ್ನದು ಕೈಯಲ್ಲ, ಗೋಲ್ಡನ್ ಹ್ಯಾಂಡ್ ಅಂತ ಹೇಳಿದ್ಯಲ್ಲಾ: ಜೆಡಿಎಸ್ ವಿಕಲಚೇತನ ಪಕ್ಷ ಎಂದ ಸಿ. ಟಿ ರವಿಗೆ ಎಚ್.ಡಿ ಕುಮಾರಸ್ವಾಮಿ ಡಿಚ್ಚಿ!

ಬೆಂಗಳೂರು: ನಾವು ಅವಕಾಶವಾದಿ ರಾಜಕಾರಣಿಗಳು ಅಂತ ಹೇಳಿದ್ದಾರೆ. ರಾಜಕಾರಣದಲ್ಲಿ ವಿಕಲಾಂಗ ವ್ಯವಸ್ಥೆ ಇರಬಾರದು ಅಂದಿದ್ದೀರಿ. ನೀವು ಯಾವ ಸಿದ್ಧಾಂತದ ಮೇಲೆ ಬಂದವರು. ಈ ರಾಜ್ಯದಲ್ಲಿ ವಿಕಲಚೇತರಿಗೆ ಶಕ್ತಿ ತುಂಬಿದವರು ನಾವು ಎಂದು ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಶಾಸಕ ಸಿ.ಟಿ.ರವಿ ಅವರಿಗೆ ಟಾಂಗ್ ಕೊಟ್ಟರು.

ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಜೆಡಿಎಸ್ ವಿಕಲಚೇತನ ಪಕ್ಷ ಅನ್ನೋ ರೀತಿ ಸಿ.ಟಿ.ರವಿ ಕೊಟ್ಟಿದ್ದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಅವಕಾಶವಾದಿ ರಾಜಕಾರಣಿಗಳೂ ಅಂತ ಹೇಳಿದ್ದಾರೆ. ರಾಜಕಾರಣದಲ್ಲಿ ವಿಕಲಾಂಗ ವ್ಯವಸ್ಥೆ ಇರಬಾರದು ಅಂದಿದ್ದೀರಿ. ಏನ್ ನೀವು ಸಿದ್ಧಾಂತದ ಮೇಲೆ ಬಂದವರು. ಈ ರಾಜ್ಯದಲ್ಲಿ ವಿಕಲಚೇತರಿಗೆ ಶಕ್ತಿ ತುಂಬಿದವರು ಈ ಕುಮಾರಸ್ವಾಮಿ. ನಮ್ಮ ಸರ್ಕಾರದ ಅವಧಿಯಲ್ಲಿ ವಿಕಲಚೇತನರಿಗೆ ಇಂಧನ ಇಲಾಖೆಯಲ್ಲಿ ನೌಕರಿ ಕೊಟ್ಟಿದ್ದೆ. ವಿಕಲಚೇತನರಿಗೆ ಶಕ್ತಿ ತುಂಬಿದರೆ ಅವರು ಸಹ ಬದುಕಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದೇನೆ ಎಂದು ಹೇಳಿದರು.

ನಾವು ರಾಜಕಾರಣದಲ್ಲಿ ವಿಕಲಚೇತನರೇ. ಈ ವಿಕಲಚೇತನರ ಪಕ್ಷದ ಬಗ್ಗೆ ಮಾತಾಡ್ತೀರಾ?. ನನ್ನ ಬಳಿ ಆವಾಗ ಬಂದಿದ್ದೀರಲ್ಲ, ಸಾಲ ತೀರಿಸಲು ಅಗಲ್ಲ ಅಂತ ಬಂದಿದ್ರಲ್ಲ, ಸಹಾಯ ಮಾಡಿದ ನಂತರ ನೀವು ಬಂದಿದ್ರಲ್ಲ. ಅಣ್ಣ ನಿನ್ನದು ಕೈಯಲ್ಲ-ಗೋಲ್ಡನ್ ಹ್ಯಾಂಡ್ ಅಂತ ಹೇಳಿದ್ದೀರಲ್ಲ, ಈಗ ವಿಕಲಚೇತನರ ಬಗ್ಗೆ ಬಹಳ ಮಾತನಾಡುತ್ತೀರಾ ಎಂದು ಕಿಡಿಕಾರಿದರು.

Latest Indian news

Popular Stories