ಪ್ರಯಾಗರಾಜ್:ದರೋಡೆಕೋರ-ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಗುಂಡಿಕ್ಕಿ ಕೊಂದ ಮೂವರು ವ್ಯಕ್ತಿಗಳು ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂವರು ಹಂತಕರನ್ನು ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಅವರು ಪತ್ರಕರ್ತರಂತೆ ಕಾಣಿಸಿಕೊಂಡು ಅಹ್ಮದ್ ಮತ್ತು ಅವರ ಸಹೋದರನ ಮೇಲೆ ಗುಂಡು ಹಾರಿಸಿದರು.
ಮೂಲಗಳ ಪ್ರಕಾರ, ಶೂಟರ್‌ಗಳು ತಮ್ಮ ವಿಚಾರಣೆಯ ಸಮಯದಲ್ಲಿ ಕೆಲವೊಂದು ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ. ಬಿಷ್ಣೋಯ್ ಅವರ ಸಂದರ್ಶನಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಿದ ಸನ್ನಿ ಸಿಂಗ್ ಅಹ್ಮದ್‌ನನ್ನು ಕೊಲ್ಲುವ ಸಂಪೂರ್ಣ ಕಾರ್ಯಾಚರಣೆಯನ್ನು ಯೋಜಿಸಿದ್ದರು. ಬಿಷ್ಣೋಯ್ ಅವರ ಕೋಮು ಪ್ರೆರೀತ ಭಾಷಣಗಳಿಂದ ಸಿಂಗ್ ಹೆಚ್ಚು ಪ್ರಭಾವಿತರಾಗಿದ್ದ. ಕಳೆದ ವರ್ಷ ಮೇ 29 ರಂದು ಬಿಷ್ಣೋಯ್ ಗ್ಯಾಂಗ್ ಸದಸ್ಯರಿಂದ ಗುಂಡೇಟಿಗೆ ಬಲಿಯಾದ ಸಂಗೀತಗಾರ ಸಿಧು ಮೂಸ್ ವಾಲಾ ಅವರಂತಹ “ದೊಡ್ಡ ಕೊಲೆ” ಕನಸು ಕಂಡಿದ್ದರು ಎಂದು ವರದಿಯಾಗಿದೆ.