ಅತ್ಯಾಚಾರಕ್ಕೆ ಯತ್ನ; ಬಸ್’ನಿಂದ ಜಿಗಿದು ಗಂಭೀರವಾಗಿ ಗಾಯಗೊಂಡ ಶಿಕ್ಷಕಿ

ಪಾಟ್ನಾ: ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಐವರು ಅತ್ಯಾಚಾರಕ್ಕೆ ಯತ್ನಿಸಿದ ನಂತರ ವೇಗವಾಗಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ನಂತರ ಸಿಲ್ಲಿಗುರಿಯ 35 ವರ್ಷದ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಮಂಗಳವಾರ ರಾತ್ರಿ ಬಯಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಲ್ಕೊಳ ಚೆಕ್‌ಪೋಸ್ಟ್ ಬಳಿ ಈ ಘಟನೆ ನಡೆದಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಪುರ್ನಿಯಾದಲ್ಲಿ ದಾಖಲಾಗಿರುವ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ.

ಸಂತ್ರಸ್ತೆ ವೈಶಾಲಿಯಿಂದ ಸಿಲಿಗುರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹತ್ತಿದ್ದಾರೆ. ವೈಶಾಲಿಯಿಂದ ಬಸ್ಸು ಹೊರಟಾಗ, ಅದು ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಬಳಿಕ ಪ್ರಯಾಣಿಕರು ತಮ್ಮ ಸ್ಥಳಗಳನ್ನು ತಲುಪಿದ ನಂತರ ಬಸ್‌ನಿಂದ ಕೆಳಗಿಳಿದರು. ಪುರ್ನಿಯಾ ರ್ಣಿಯಾ ತಲುಪಿದಾಗ, ಬಸ್‌ನ ಚಾಲಕ ಮತ್ತು ಕಂಡಕ್ಟರ್ ಹೊರತುಪಡಿಸಿ ಕೇವಲ ಐವರು ಮಾತ್ರ ಉಳಿದಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಅವರು ನನ್ನ ಮೇಲೆ ಅಶ್ಲೀಲ ಕಾಮೆಂಟ್‌ಗಳನ್ನು ರವಾನಿಸಲು ಪ್ರಾರಂಭಿಸಿದರು. ನಂತರ ಹತ್ತಿರ ಬಂದು ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ನಾನು ಸಹಾಯಕ್ಕಾಗಿ ಕೂಗಿದೆ ಆದರೆ, ಚಾಲಕ ಮತ್ತು ಕಂಡಕ್ಟರ್ ಇವರಿಗೆ ಹೆದರಿ ನನಗೆ ಸಹಾಯ ಮಾಡಲಿಲ್ಲ. ಕೊನೆಗೆ ನಾನು ಬಸ್ಸಿನ ಕಿಟಕಿಯಿಂದ ಜಿಗಿದಿದ್ದೇನೆ ಎಂದು ತಿಳಿಸಿದ್ದಾರೆ.

ಘಟನೆ ನಂತರ ಬಸ್ ಚಾಲಕ ಮತ್ತು ಎಲ್ಲರೂ ಬಸ್‌ನಲ್ಲೇ ವೇಗವಾಗಿ ಹೋಗಿದ್ದಾರೆ. ಸಂತ್ರಸ್ತೆಗೆ ಗಂಭೀರ ಗಾಯಗಳಾಗಿವೆ. ಕೆಲವು ದಾರಿಹೋಕರು ಘಟನೆ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು.

ಘಟನೆ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಮತ್ತು ತಕ್ಷಣ ಗಸ್ತು ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ತಂಡವು ಸಂತ್ರಸ್ತೆಯನ್ನು ರಕ್ಷಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದೆ. ಆಕೆಯ ಹೇಳಿಕೆಯನ್ನು ಈಗ ದಾಖಲಿಸಿಕೊಳ್ಳಲಾಗಿದೆ. ನಾವು ಈಗ ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪುರ್ನಿಯಾದ ಎಸ್ಪಿ ಅಮೀರ್ ಜಾವೇದ್ ಹೇಳಿದರು.

Latest Indian news

Popular Stories