ನವದೆಹಲಿ: ಸ್ವತಂತ್ರ ವೈದ್ಯಕೀಯ ತಜ್ಞರು, ಶಿಶುವೈದ್ಯರು ಮತ್ತು ಪೌಷ್ಟಿಕತಜ್ಞರ ರಾಷ್ಟ್ರೀಯ ಚಿಂತಕರ ಚಾವಡಿಯಾದ ನ್ಯೂಟ್ರಿಷನ್ ಅಡ್ವೊಕಸಿ ಇನ್ ಪಬ್ಲಿಕ್ ಇಂಟರೆಸ್ಟ್-ಇಂಡಿಯಾ (NAPi), ಅನಾರೋಗ್ಯಕರ ಬಿಸ್ಕೆಟ್ ಬ್ರಾಂಡ್ ಅನ್ನು ಪ್ರಚಾರ ಮಾಡುವುದರ ವಿರುದ್ಧ ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.
ಭವಿಷ್ಯದಲ್ಲಿ ಅಲ್ಟ್ರಾ-ಸಂಸ್ಕರಿಸಿದ ಆಹಾರ ಉತ್ಪನ್ನಗಳೆಂದು ಲೇಬಲ್ ಮಾಡಬಹುದಾದ ಯಾವುದೇ ಅನಾರೋಗ್ಯಕರ ಆಹಾರ ಉತ್ಪನ್ನಗಳ ಪ್ರಚಾರಕ್ಕೆ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳದಂತೆ ಅವರು ವಿನಂತಿಸಿದ್ದಾರೆ.
‘ಬ್ರಿಟಾನಿಯಾ ಮಿಲ್ಕ್ ಬಿಕಿಸ್’ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಡಿಸೆಂಬರ್ 28 ರಂದು ಬಿಗ್ ಬಿ ಅವರಿಗೆ ಚಿಂತಕರ ಚಾವಡಿಯು ಈ ಹಿಂದೆಯೇ ಪತ್ರ ಬರೆದಿತ್ತು. ಮುಂದಿನ ದಿನಗಳಲ್ಲಿ ‘ಅಲ್ಟ್ರಾ-ಪ್ರೊಸೆಸ್ಡ್ ಆಹಾರ ಉತ್ಪನ್ನಗಳು ಅಥವಾ ಹೆಚ್ಚಿನ ಕೊಬ್ಬು/ಸಕ್ಕರೆ ಮತ್ತು ಉಪ್ಪಿನ ಆಹಾರಗಳು (HFSS) ಎಂದು ಲೇಬಲ್ ಮಾಡಬಹುದಾದ ಆಹಾರ ಪದಾರ್ಥಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳದಂತೆ ಜನವರಿ 11ರ ಪತ್ರದಲ್ಲಿ ಮನವಿ ಮಾಡಿದೆ.
ವಕೀಲರ ಗುಂಪಿನ ಸದಸ್ಯರು ಸಹಿ ಮಾಡಿದ ಪತ್ರವು, ಅಲ್ಟ್ರಾ-ಪ್ರೊಸೆಸ್ಡ್ ಆಹಾರ ಉತ್ಪನ್ನಗಳು (UPFs) ಮಾನವನ ಆರೋಗ್ಯಕ್ಕೆ ಏಕೆ ಹಾನಿಕಾರಕವಾಗಿದೆ ಎಂಬುದರ ಕುರಿತು ಮಾಹಿತಿಯನ್ನು ನೀಡುವ ಲೇಖನವನ್ನು ಸಹ ಒಳಗೊಂಡಿದೆ. ‘ಸರಳವಾಗಿ ಇದರರ್ಥ 10 ಪ್ರತಿಶತಕ್ಕಿಂತ ಹೆಚ್ಚಿನ ಸಕ್ಕರೆ ಹೊಂದಿರುವ ಯಾವುದೇ ಆಹಾರ ಉತ್ಪನ್ನ ಅಥವಾ ಸ್ಯಾಚುರೇಟೆಡ್ ಕೊಬ್ಬು ಎಚ್‌ಎಫ್ಎಸ್ಎಸ್ ಆಗಿದೆ. ಮಾನವನ ಆರೋಗ್ಯಕ್ಕೆ ಹಾನಿಕಾರಕವಾದ ಆಹಾರ ಉತ್ಪನ್ನದ ಜಾಹಿರಾತುವಿನಲ್ಲಿ ಕಾಣಿಕೊಳ್ಳಬೇಕೆ ಅಥವಾ ಬೇಡವೇ ಎಂಬ ಪ್ರಜ್ಞಾಪೂರ್ವಕ ನಿರ್ಧಾರವನ್ನು ನೀವು ತೆಗೆದುಕೊಳ್ಳಬಹುದು’ ಎಂದು ಪತ್ರವು ಹೇಳಿದೆ.
ಈ ಪತ್ರಕ್ಕೆ ಕಮ್ಯುನಿಟಿ ಮಕ್ಕಳ ತಜ್ಞೆ, ಜನ ಸ್ವಾಸ್ಥ್ಯ ಅಭಿಯಾನದ ಜಂಟಿ ಸಂಚಾಲಕಿ ಮತ್ತು ಸಾರ್ವಜನಿಕ ಆರೋಗ್ಯ ಸಂಪನ್ಮೂಲದ (ಪಿಎಚ್‌ಆರ್‌ಎನ್) ರಾಷ್ಟ್ರೀಯ ಸಂಚಾಲಕಿ ಡಾ. ವಂದನಾ ಪ್ರಸಾದ್ ಹಾಗೂ ಮಕ್ಕಳ ತಜ್ಞ ಮತ್ತು ಎನ್‌ಎಪಿಯ ಸಂಚಾಲಕ ಡಾ. ಅರುಣ್ ಗುಪ್ತಾ ಸಹ ಸಹಿ ಮಾಡಿದ್ದಾರೆ ಎಂದು ಪತ್ರದ ಸಹಿದಾರರಲ್ಲಿ ಒಬ್ಬರು ತಿಳಿಸಿದ್ದಾರೆ. ಮೊದಲ ಪತ್ರಕ್ಕೆ ಅಮಿತಾಬ್ ಬಚ್ಚನ್ ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅವರು ಮತ್ತೊಮ್ಮೆ ಪತ್ರ ಬರೆದಿದ್ದಾರೆ.
2014 ರಲ್ಲಿ, ಬಚ್ಚನ್ ಪೆಪ್ಸಿಯೊಂದಿಗಿನ ತನ್ನ ಒಪ್ಪಂದವನ್ನು ಮಕ್ಕಳ ಮೇಲೆ ಬೀರುವ ಆರೋಗ್ಯದ ಪರಿಣಾಮದಿಂದಾಗಿ ತ್ಯಜಿಸಿದ್ದರು. 2018 ರಲ್ಲಿ ಸಹ ಅವರು ಹಾರ್ಲಿಕ್ಸ್ ಜೊತೆಗಿನ ಒಡನಾಟವನ್ನು ನಿರಾಕರಿಸಿದ್ದರು. ‘ಈ ಬಾರಿಯೂ ಅವರು ಇಂತಹ ಅನಾರೋಗ್ಯಕರ ಆಹಾರ ಉತ್ಪನ್ನಗಳನ್ನು ಪ್ರಚಾರ ಮಾಡುವುದರಿಂದ ಮತ್ತೆ ತಮ್ಮನ್ನು ತಾವು ಬೇರ್ಪಡಿಸಿಕೊಳ್ಳುತ್ತಾರೆ ಎಂದು ನಾವು ಆಶಿಸುತ್ತೇವೆ’ ಎಂದು ಡಿಸೆಂಬರ್ 28ರಂದು ಕಳುಹಿಸಿದ್ದ ಪತ್ರದಲ್ಲಿ ತಿಳಿಸಿದ್ದರು.
ಮಕ್ಕಳ ಟಿವಿ ಕಾರ್ಯಕ್ರಮದಲ್ಲಿ ನೀವು ‘ಬ್ರಿಟಾನಿಯಾ ಮಿಲ್ಕ್ ಬಿಕಿಸ್’ ಬಿಸ್ಕೆಟ್‌ಗಳನ್ನು ಅನುಮೋದಿಸಲು ಆಯ್ಕೆ ಮಾಡಿದ್ದೀರಿ ಎಂದು ತಿಳಿದು ನಮಗೆ ಆಘಾತ ಮತ್ತು ಆಶ್ಚರ್ಯವಾಗಿದೆ. ಬಿಸ್ಕೆಟ್ ಬ್ರಾಂಡ್‌ನ ಜಾಹೀರಾತುಗಳು ಅನಾರೋಗ್ಯಕರ, ಅಲ್ಟ್ರಾ-ಸಂಸ್ಕರಿಸಿದ ಮತ್ತು ಪೂರ್ವ-ಪ್ಯಾಕೇಜ್ ಮಾಡಿದ ಆಹಾರ ಉತ್ಪನ್ನವನ್ನು ಸಮೀಕರಿಸುವ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುತ್ತದೆ ಎಂಬ ಅಂಶವನ್ನು ನಾವು ಗಮನ ಸೆಳೆಯಲು ಬಯಸುತ್ತೇವೆ. ಇದು ಕೈಗಾರಿಕಾ ಸೂತ್ರೀಕರಣವಾಗಿದೆ. ನಿಜವಾದ ಆಹಾರಗಳೆಂದರೆ ‘ಅಟ್ಟಾ ರೊಟ್ಟಿ’ ಮತ್ತು ‘ಒಂದು ಲೋಟ’ ಹಾಲು’ ಎಂದು ಅವರು ಹೇಳಿದರು.