ಬೆಂಗಳೂರು: ಮದುವೆ ಸಂದರ್ಭದಲ್ಲಿ ಹೆಣ್ಣು ಅಪ್ರಾಪ್ತ ವಯಸ್ಕಳಾಗಿದ್ದಳು ಎಂಬ ಮಾತ್ರಕ್ಕೆ ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 11ರಡಿ ವಿವಾಹ ಅನೂರ್ಜಿತವಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ವಿವಾಹ ರದ್ದುಗೊಳಿಸಿ ಕೌಟುಂಬಿಕ ನ್ಯಾಯಾ ಲಯ ನೀಡಿದ್ದ ಆದೇಶ ರದ್ದುಪಡಿ ಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮ ನವಿಯನ್ನು ಮಾನ್ಯ ಮಾಡಿರುವ ನ್ಯಾ| ಆಲೋಕ್ ಆರಾಧೆ ಹಾಗೂ ನ್ಯಾ| ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಮದುವೆ ಸಂದರ್ಭ ಯುವತಿ ಅಪ್ರಾಪ್ತ ವಯಸ್ಕಳಾಗಿದ್ದಳು ಎಂಬ ಕಾರಣಕ್ಕೆ ಮದುವೆಯನ್ನು ಅನೂರ್ಜಿತಗೊಳಿಸಿ 2015ರ ಜ.8ರಂದು ಕೌಟುಂಬಿಕ ನ್ಯಾಯಾ ಲಯ ನೀಡಿದ್ದ ಆದೇಶವನ್ನೂ ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಇಂಥ ಪ್ರಕರಣದಲ್ಲಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 11ರಡಿ ಮದುವೆ ಅನೂರ್ಜಿತ ಆಗುವುದಿಲ್ಲ. ಯಾಕೆಂದರೆ, ಅಪ್ರಾಪ್ತ ವಯಸ್ಕಳ ಜತೆಗಿನ ವಿವಾಹವನ್ನು ಸೆಕ್ಷನ್ 11ರ ವ್ಯಾಪ್ತಿಯಿಂದ ಹೊರತುಪಡಿಸ ಲಾಗಿದೆ. ಇದರಲ್ಲಿ ಮದುವೆಗೆ ಇಂತಿಷ್ಟೇ ವಯಸ್ಸು ಆಗಿರಬೇಕು ಎಂಬ ಷರತ್ತು ಇಲ್ಲ. ಈ ಅಂಶವನ್ನು ಕೌಟುಂಬಿಕ ನ್ಯಾಯಾಲಯ ಪರಿಗ ಣಿಸಿಲ್ಲ. ಕೌಟುಂಬಿಕ ನ್ಯಾಯಾ ಲಯದ ಪ್ರಕಾರ ವಿವಾಹ ಅನೂರ್ಜಿ ತವಾಗದು ಎಂದು ಹೇಳಿದೆ.