ಅಫಘಾನಿಸ್ತಾನ ವಿರುದ್ಧ ನ್ಯೂಝಿಲೆಂಡ್’ಗೆ ಜಯ: ಭಾರತದ ಸೆಮಿ ಆಸೆಗೆ ತಣ್ಣೀರು

ದುಬೈ: ನ್ಯೂಝಿಲೆಂಡ್ ತಂಡ ಅಫಘಾನಿಸ್ತಾನ ವಿರುದ್ಧ 8 ವಿಕೆಟ್ ವಿಜಯ ಸಾಧಿಸಿದೆ. ಅಫಘಾನಿಸ್ತಾನ 125 ರನ್ ಗುರಿಯನ್ನು ಸುಲಭವಾಗಿ ಗುರಿ ಮುಟ್ಟುವ ಮುಖಾಂತರ ಭಾರತದ ಸೆಮಿ ಆಸೆಗೆ ತಣ್ಣೀರೆಚಿದೆ.

ಕೇನ್ ವಿಲಿಯಮ್ಸನ್ 40 ಮತ್ತು ದೇವ್ ಕನ್ವಯ್ 36 ರನ್ ಬಾರಿಸಿ ತಂಡಕ್ಕೆ ಜಯ ದೊರಕಿಸಿಕೊಟ್ಟರು.

ಅಫಘಾನ್ ಪರ ನಜೀಬುಲ್ಲಾ 73 ರನ್ ಬಾರಿಸಿದರೂ ಬೇರೆಯವರ ಸಾಥ್ ಸರಿಯಾಗಿ ಸಿಕ್ಕಿಲ್ಲ. ನ್ಯೂಝಿಲೆಂಡ್ ಪರ ಬೋಲ್ಟ್ 3 ವಿಕೆಟ್ ಪಡೆದರು.

ಭಾರತ ಸೆಮಿ ಪ್ರವೇಶಕ್ಕೆ ನ್ಯೂಝಿಲೆಂಡ್ ಸೋಲು ಅನಿವಾರ್ಯವಾಗಿತ್ತು. ಆದರೆ ಆ ಪವಾಡ ಮಾತ್ರ ಇವತ್ತು ಘಟಿಸದೆ ಭಾರತ ಸೆಮಿಯಿಂದ ಹೊರ ಬಿದ್ದಿದೆ.

Latest Indian news

Popular Stories

error: Content is protected !!