ಕ್ಯಾಲಿಕಟ್: ಅಬುಧಾಬಿಯಿಂದ ಕೋಝಿಕ್ಕೋಡ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಟೇಕ್ ಆಫ್ ಆದ ಕೂಡಲೇ ಇಂಜಿನ್ ಒಂದರಲ್ಲಿ ಜ್ವಾಲೆ ಕಾಣಿಸಿಕೊಂಡಿದ್ದರಿಂದ ಮತ್ತೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು DGCA ತಿಳಿಸಿದೆ.
184 ಪ್ರಯಾಣಿಕರು ವಿಮಾನದಲ್ಲಿ ಟೇಕ್ ಆಫ್ ಆಗಿದ್ದರು.
“ಟೇಕ್ ಆಫ್ ಆಗಿ 1,000 ಅಡಿಗಳಿಗೆ ಏರಿದ ನಂತರ, ಪೈಲಟ್ ಎಂಜಿನ್ ಒಂದರಲ್ಲಿ ಜ್ವಾಲೆಯನ್ನು ಪತ್ತೆಹಚ್ಚಿದರು. ನಂತರ ಮತ್ತೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ” ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎಎನ್‌ಐಗೆ ತಿಳಿಸಿದೆ.