ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ: ಅಶ್ವಥ್-ನಿಖಿಲ್ ವಿರುದ್ಧ, ಅಶೋಕ್-ಡಿಕೆಶಿ ವಿರುದ್ಧ ಗೆದ್ದು ತೋರಿಸಲಿ; ಯೋಗೇಶ್ವರ್ ಆಡಿಯೋ ಲೀಕ್!

ರಾಮನಗರ: ಕೇಂದ್ರ ಗೃಹ ಸಚಿವ ನಮ್ಮ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ,  ಪಾರ್ಟಿ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ ಎಂದು  ಬಿಜೆಪಿ ಎಂಎಲ್ ಸಿ ಯೋಗೇಶ್ವರ್  ಮಾತನಾಡಿರುವ  ಆಡಿಯೋವೊಂದು ವೈರಲ್ ಆಗಿದೆ.

ರಾಜ್ಯ ವಿಧಾನ ಸಭಾ ಚುನಾವಣೆಯ​ ಹೊತ್ತಲ್ಲೇ ಕರ್ನಾಟಕದಿಂದ ದೆಹಲಿ ರಾಜಕಾರಣದವರೆಗೂ ಮಾತನಾಡಿರೋ ಸ್ಫೋಟಕ ಆಡಿಯೋವನ್ನು ಖಾಸಗಿ ಚಾನೆಲ್ ವೊಂದು ಬಿತ್ತರಿಸಿದೆ.

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಬಿಸಿ ಬಿಸಿ ಚರ್ಚೆ​ ಆಗಿದೆ. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ ಎಂದು ಯೋಗೇಶ್ವರ್​ ಹೇಳಿರೋದು ಸಂಚಲನ ಸೃಷ್ಟಿಸಿದೆ.

ಅಮಿತ್ ಶಾ ಹೊಂದಾಣಿಕೆ ರಾಜಕೀಯ ಬಿಜೆಪಿಗೆ ಬೇಡ ಅಂತಾರೆ. ಹೊಂದಾಣಿಕೆ ಅನ್ನೋದು ತಾಯಿಗೆ ದ್ರೋಹ ಮಾಡಿದಂತೆ ಅಂತಾರೆ. ನಮ್ಮ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ. ಪಾರ್ಟಿ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ ಎಂದು ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾಗಿದೆ.

ಸಚಿವರಾದ ಅಶ್ವತ್ಥ್ ನಾರಾಯಣ್, ಆರ್‌.ಅಶೋಕ್‌ಗೆ ಖಡಕ್ ಸವಾಲ್ ಹಾಕಿದ್ದಾರೆ. ನಾನು ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡ್ತೀನಿ. ರಾಮನಗರದಲ್ಲಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಸಚಿವ ಅಶ್ವತ್ಥ್​ ನಾರಾಯಣ​, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್​ ವಿರುದ್ಧ ಆರ್​.ಅಶೋಕ್​ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಈ ಬಾರಿ ಜನಾಭಿಪ್ರಾಯದ ಮೂಲಕ ಬಿಜೆಪಿ ಸರ್ಕಾರ ಬರೋದಿಲ್ಲ ಎಂದು ಯೋಗೇಶ್ವರ್ ಆಡಿಯೋದಲ್ಲಿ ಹೇಳಿದ್ದಾರೆ.

Latest Indian news

Popular Stories