ಅಮೇರಿಕಾದಲ್ಲಿ ಕ್ರಿಸ್ಮಸ್ ಪೆರೇಡ್ ಸಂದರ್ಭದಲ್ಲಿ ವಾಹನ ನುಗ್ಗಿಸಿದ ದುಷ್ಕರ್ಮಿ; ಹಲವು ಮಂದಿ ಮೃತ್ಯು

ಅಮೇರಿಕಾ: ವಿಸ್ಕಾನ್ಸಿನ್ ನಲ್ಲಿ ಕ್ರಿಸ್ಮಸ್ ಪರೇಡ್ ನಡೆಸುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಏಕಾಏಕಿ ಬ್ಯಾರಿಕೇಡ್ ಮುರಿದು ಎಸ್.ಯು.ವಿ ಕಾರು ನುಗ್ಗಿಸಿದ ಪರಿಣಾಮ ಹಲವು ಮಂದಿ ಮೃತಪಟ್ಟಿದ್ದಾರೆ.

ಪೊಲೀಸರು ಕಾರನ್ನು ನಿಲ್ಲಿಸಲು ಹಲವು ಸುತ್ತಿನ ಗುಂಡು ಹಾರಿಸಿದರೂ ಕಾರು ನಿಲ್ಲಿಸಿರಲ್ಲಿಲ್ಲ. ಮೃತಪಟ್ಟವರ ಸಂಖ್ಯೆ ಇನ್ನು ಕೂಡ ಧೃಡಪಟ್ಟಿಲ್ಲ. ಈ ಘಟನೆಯಲ್ಲಿ ಹಲವು ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದರೊಂದಿಗೆ ಮಕ್ಕಳು, ಮಹಿಳೆಯರು ಸೇರಿದಂತೆ ಇಪ್ಪತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯ ಎಸಗಿದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ಕುರಿತು ಅಮೇರಿಕಾದ ಅಧ್ಯಕ್ಷ ಜೊಯ್ ಬಿಡೆನ್ ಅವರಿಗೆ ವರದಿ ಸಲ್ಲಿಸಲಾಗಿದೆ. ಕೃತ್ಯ ಎಸಗಿದ ವ್ಯಕ್ತಿಯನ್ನೂ ವಶಕ್ಕೆ ಪಡೆಯಲಾಗಿದೆ.

Latest Indian news

Popular Stories

error: Content is protected !!