ಅರಬ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲೇ ಅತ್ಯಂತ ದೊಡ್ಡದಾದ ದುಬೈ ಲೈಬ್ರೆರಿಗೆ ಕನ್ನಡ ಪುಸ್ತಕಗಳ ಸೇರ್ಪಡೆ

ಅರಬ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲೇ ಅತ್ಯಂತ ದೊಡ್ಡದಾದ ಮತ್ತು ಬೃಹತ್ ಪುಸ್ತಕ ಭಂಡಾರವುಳ್ಳ ದುಬೈಯ ಮುಹಮ್ಮದ್ ಬಿನ್ ರಾಶಿದ್
ಲೈಬ್ರರಿಯಲ್ಲಿ 15 ಲಕ್ಷಗಳಷ್ಟು ಪುಸ್ತಕಗಳು, 20 ಲಕ್ಷಗಳಷ್ಟು ಡಿಜಿಟಲ್ ಪುಸ್ತಕಗಳು ಹಾಗೂ ಇ-ಮ್ಯಾಗಝಿನ್ ಗಳ ಬೃಹತ್ ಸಂಗ್ರಹವೇ ಇದೆ.

ಅಷ್ಟೂ ಪುಸ್ತಕಗಳ ಸಂಗ್ರಹಗಳ ಮಧ್ಯೆ ಕನ್ನಡದ ಪುಸ್ತಕಗಳೂ ಸೇರಿಕೊಂಡಿತು.
ಶಿವರಾಮ ಕಾರಂತ ರವರ ಮೈಗಳ್ಳನ ದಿನಚರಿಯಿಂದ,ಜೋಣಿಯ ಕಾವೇರಿ ತೀರದ ಪಯಣ, ದುಬೈಯಲ್ಲಿರುವ ಫೌಝಿಯಾರವರ ಬಾಳ ಪಯಣ, ಕೆ. ಎನ್. ಗಣೇಶಯ್ಯ ರವರ ಶಿಲಾಕುಲ ವಲಸೆ, ಪುರುಷೋತ್ತಮ ಬಿಳಿಮಲೆ ಯವರ ಕಾಗೆ ಮುಟ್ಟಿದ ನೀರು,ಕೆ.ಎನ್. ಗಣೇಶಯ್ಯ
ರವರ ಆರ್ಯ ವೀರ್ಯ,  ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆ ,ಜಾತಿ ಬಂತು ಹೇಗೆ – ಜಿ. ಎನ್. ನಾಗರಾಜ್, ಏ.ಕೆ. ಕುಕ್ಕಿಲರವರ – ವೈರಸ್, ಶಾಂತಿ ಪ್ರಕಾಶನ ಪ್ರಕಟಿತ ಪ್ರವಾದಿ ಮುಹಮ್ಮದ್ (ಸ) ಲೋಕಾನುಗ್ರಹಿ,ಬಿ.ಎ.ಮೊಹಿದೀನ್ ರವರ  ಆತ್ಮಕಥನ ನನ್ನೊಳಗಿನ ನಾನು, ಅನುಪಮಾ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ ಅವರ ನಿನಗಾಗಿ, ಅಬ್ದುಲ್ ಸಲಾಮ್ ದೇರಳಕಟ್ಟೆಯವರ ಅನಿವಾಸಿಯ ತಲ್ಲಣಗಳೆಂಬ ಮರೀಚಿಕೆ ಹಾಗೂ ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ ಮುಂತಾದ ಕೃತಿಗಳನ್ನು ಹಸ್ತಾ೦ತರಿಸಲಾಯಿತು.

ಈ ಬೃಹತ್ ವಾಚನಾಲಯಕ್ಕೆ ಕನ್ನಡ ಎಂಬ ಹೊಸದೊಂದು ಭಾಷೆಯ ಸೇರ್ಪಡೆಯು ಓದು ಪ್ರಿಯರಾದ ಅನಿವಾಸಿ ಕನ್ನಡಿಗರಿಗೆ ಖುಷಿಯ ಸಂಗತಿ ಮತ್ತು ಅವುಗಳನ್ನು ಸ್ವೀಕರಿಸಿದ ಲೈಬ್ರರಿಯ ಡೈರೆಕ್ಟರ್ ಡೇವಿಡ್ ಮತ್ತು ಮ್ಯಾನೇಜರ್ ಖದೀಜ ಅವರಿಗೂ ಖುಷಿ ನೀಡಿತು.
ವಾಚನಾಲಯಕ್ಕೆ ಭೇಟಿ ನೀಡಿದ ತಂಡದಲ್ಲಿ ಅನಿವಾಸಿ ಲೇಖಕ ಅಬ್ದುಲ್ ಸಲಾಮ್ ದೇರಳಕಟ್ಟೆ ,ಖ್ಯಾತ ಚಿಂತಕ, ಲೇಖಕ ಮತ್ತು ವಾಗ್ಮಿ ಅಬ್ದುಲ್ಲಾ ಜಾವೇದ್, ನೂರ್ ಅಶ್ಫಾಕ್ ಕಾರ್ಕಳ ಮತ್ತು ಅಬ್ದುಲ್ ಖಾದರ್ ಕುಕ್ಕಾಜೆಯವರು ಉಪಸ್ಥಿತರಿದ್ದರು.

Latest Indian news

Popular Stories

error: Content is protected !!