ಅಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್’ನಲ್ಲಿ ಮಹಿಳೆಯರ ಪ್ರಾತಿನಿಧ್ಯದಲ್ಲಿ ಹೆಚ್ಚಳ

ಲಕ್ನೋ: ಹಿರಿಯ ಮೌಲ್ವಿಗಳು ನಡೆಸುತ್ತಿರುವ ಭಾರತದ ಉನ್ನತ ಇಸ್ಲಾಮಿಕ್ ಸಂಸ್ಥೆಯಲ್ಲಿ ಮುಸ್ಲಿಂ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ವಿವಿಧ ಕ್ಷೇತ್ರಗಳ 30 ಮುಸ್ಲಿಂ ಮಹಿಳೆಯರಿಗೆ ಸದಸ್ಯತ್ವವನ್ನು ನೀಡಿದೆ ಮತ್ತು ಮೂವರು ಮಹಿಳೆಯರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿದೆ.

ಮಹತ್ವದ ಕ್ರಮವೆಂದು ಶ್ಲಾಘಿಸಲಾದ AIMPLB ಇತ್ತೀಚೆಗೆ ಕಾನ್ಪುರದಲ್ಲಿ ನಡೆದ ಎರಡು ದಿನಗಳ ಸಾಮಾನ್ಯ ಸಭೆಯ ಸಮಯದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿತು. ಇದರಲ್ಲಿ ದೇಶಾದ್ಯಂತ ಸುಮಾರು 140 ಪ್ರತಿನಿಧಿಗಳು ಭಾಗವಹಿಸಿದ್ದರು.

ವರದಿಗಳ ಪ್ರಕಾರ, ಹೊಸದಾಗಿ ನೇಮಕಗೊಂಡ ಮಹಿಳಾ ಸದಸ್ಯರು ಯಾವುದೇ ಧಾರ್ಮಿಕ ಶೀರ್ಷಿಕೆ ಅಥವಾ ಮದ್ರಸಾ ಪದವಿಯನ್ನು ಹೊಂದಿಲ್ಲ. ಆದರೆ ಷರಿಯಾ ಕಾನೂನುಗಳ ಪ್ರಕಾರ ಸಮಾಜಕ್ಕೆ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.

ಎಐಎಂಪಿಎಲ್‌ಬಿ ಕಾರ್ಯಕಾರಿ ಸಮಿತಿ ಸದಸ್ಯ, ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಮಾತನಾಡಿ, ‘‘ದತ್ತಿ ಆಸ್ಪತ್ರೆ ನಡೆಸುತ್ತಿರುವ ಹೈದರಾಬಾದ್ ವೈದ್ಯೆ ಅಸ್ಮಾ ಜಹ್ರಾ, ಲಖನೌ ಮೂಲದ ಡಾ.ನಿಘತ್ ಪರ್ವೀನ್, ಉತ್ತರ ಪ್ರದೇಶದಲ್ಲಿ ಶಾಲೆ ಮತ್ತು ಮದರಸಾಗಳನ್ನು ನಡೆಸುತ್ತಿರುವ ಶಿಕ್ಷಣ ತಜ್ಞ ಹಾಗೂ ದೆಹಲಿಯ ಸಮಾಜ ಸೇವಕಿ ಅತಿಯಾ ಪರ್ವೀನ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ.

ದೇಶಾದ್ಯಂತ ಮುಸ್ಲಿಂ ಮಹಿಳೆಯರ ಹೆಸರನ್ನು ಶಿಫಾರಸು ಮಾಡಲಾಗಿದ್ದು, ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಮರನ್ನು ಅರ್ಹ ಮತ್ತು ಮುಸ್ಲಿಮ್ ಧಾರ್ಮಿಕತೆ ಅಭ್ಯಾಸ ಮಾಡುವವರನ್ನು ಮಂಡಳಿಯು ನಾಮನಿರ್ದೇಶನ ಮಾಡಿದೆ ಎಂದು ಅವರು ಹೇಳಿದರು.

AIMPLB ಸಾಮಾಜಿಕ ಅಥವಾ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಲು ಮುಸ್ಲಿಂ ಮಹಿಳೆಯರಿಗೆ ಸಹಾಯ ಮಾಡಲು ಮಹಿಳಾ ಸಹಾಯವಾಣಿಯನ್ನು ಸಹ ನಡೆಸುತ್ತಿದೆ ಮತ್ತು ತ್ರಿವಳಿ ತಲಾಖ್, ವರದಕ್ಷಿಣೆ, ಮದುವೆಗಳಲ್ಲಿ ದುಂದುಗಾರಿಕೆ ಮತ್ತು ಇತರ ಸಾಮಾಜಿಕ ಅನಿಷ್ಟಗಳ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ವಿಶೇಷ ತಂಡ ರಚಿಸಿದೆ ಎಂದರು.

Latest Indian news

Popular Stories

error: Content is protected !!