ಅಸ್ಸಾಂ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ: 150ಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮ

ಗುವಾಹಟಿ: ಅಸ್ಸಾಂನ ಜೋರ್ಹತ್ ಜಿಲ್ಲೆಯ ಮಾರುಕಟ್ಟೆಯೊಂದರಲ್ಲಿ ಗುರುವಾರ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 150 ಅಂಗಡಿಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

As many as 25 fire tenders are trying to douse the fire at Chowk Bazar in the heart of Jorhat town, but the fire is yet to be brought under control, he said.

ಅಂಗಡಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ದಟ್ಟಣೆಯ ಮಾರುಕಟ್ಟೆಯಲ್ಲಿ ಬಹು ಬೇಗ ಬೆಂಕಿ ವ್ಯಾಪಿಸಿದೆ. ಎಲ್ಲ ಅಂಗಡಿಗಳು ಬಾಗಿಲ ಮುಚ್ಚಿ, ಸಿಬ್ಬಂದಿ ಮನೆಗೆ ತೆರಳಿದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ. ಅಗ್ನಿಗೆ ಆಹುತಿಯಾದ ಬಹುತೇಕ ಅಂಗಡಿಗಳು ದಿನಸಿ ಮತ್ತು ಬಟ್ಟೆ ಅಂಗಡಿಗಳಾಗಿವೆ.

ಸಮೀಪದ ಪಟ್ಟಣಗಳಾದ ಟಿಟಾಬೋರ್ ಮತ್ತು ಮರಿಯಾನಿ ಮತ್ತು ಗೋಲಾಘಾಟ್ ಜಿಲ್ಲೆಯಿಂದ  ಬೆಂಕಿಯನ್ನು ನಂದಿಸಲು  ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories