ಆಧಾರ್‌ ಕಾರ್ಡ್ ನವೀಕರಣಗೊಳಿಸಲು ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ

ಉಡುಪಿ; ಜನವರಿ 19: ಜಿಲ್ಲೆಯಲ್ಲಿ ಕಳೆದ 10 ವರ್ಷಗಳ ಹಿಂದೆಆಧಾರ್‌ಕಾರ್ಡ್ ನೊಂದಣಿ ಮಾಡಿಸಿಕೊಂಡ ಪ್ರತಿಯೊಬ್ಬ ಸಾರ್ವಜನಿಕರೂತಮ್ಮ ವಿಳಾಸ ದೃಢೀಕರಣದಾಖಲೆಯೊಂದಿಗೆಆಧಾರ್ ಕೇಂದ್ರಗಳಿಗೆ ಭೇಟಿ ನೀಡಿನವೀಕರಣ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಕೂರ್ಮಾರಾವ್ ಎಂ ಹೇಳಿದರು.

ಅವರುಬುಧವಾರರಜತಾದ್ರಿಯಜಿಲ್ಲಾಧಿಕಾರಿಕಚೇರಿಯಲ್ಲಿ ನಡೆದಆಧಾರ್ ನವೀಕರಣಕುರಿತಸಭೆಯಅಧ್ಯಕ್ಷತೆ ವಹಿಸಿಮಾತನಾಡಿದರು.

ಸರ್ಕಾರ ನೀಡಿರುವಆಧಾರ್ ವಿಶಿಷ್ಠ ಗುರುತಿನಚೀಟಿಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಗಳೂ ಮಾಡಿಸಿಕೊಳ್ಳಬೇಕು,ಈಗಾಗಲೇ ಆಧಾರ್‌ಕಾರ್ಡ್‌ನೊಂದಣಿಯನ್ನು 10 ವರ್ಷಗಳ ಹಿಂದೆ ಮಾಡಿಸಿದ್ದವರು ತಮ್ಮ ವಿಳಾಸ ಗುರುತಿನ ದಾಖಲೆಗಳನ್ನು ನೀಡುವುದರೊಂದಿಗೆಕಡ್ಡಾಯವಾಗಿನವೀಕರಣಗೊಳಿಸಿಕೊಳ್ಳಬೇಕು ಎಂದರು.

ಈಗಾಗಲೇ ಜಿಲ್ಲೆಯಲ್ಲಿ5 ವರ್ಷದೊಳಗಿನ 42312 ಮಕ್ಕಳುಆಧಾರ್ ನೊಂದಣಿ ಮಾಡಿಸಿಕೊಂಡಿದ್ದು, ಕೈ ಬೆರಳಚ್ಚು ಮತ್ತುಕಣ್ಣಿನ ಸ್ಕ್ಯಾನ್ ಸೇರಿದಂತೆ ಮತ್ತಿತರ ಬಯೋಮೆಟ್ರಿಕ್ ನೀಡದೇಇರುವ, ಪ್ರತಿಯೊಬ್ಬಆಧಾರ್ ನೊಂದಣಿ ಮಾಡಿಸಿಕೊಂಡಿರುವ ಮಕ್ಕಳು ಬಯೋಮೆಟ್ರಿಕ್‌ನೀಡಬೇಕುಎಂದರು.

ಜಿಲ್ಲೆಯಲ್ಲಿ 13 ಲಕ್ಷಕ್ಕೂಅಧಿಕಜನರುಆಧಾರ್ ನೊಂದಣಿಯನ್ನು ಮಾಡಿಸಿಕೊಂಡಿದ್ದು ,ಅದರಲ್ಲಿ15 ವರ್ಷ ಮೇಲ್ಪಟ್ಟ2 ಲಕ್ಷಜನರುತಮ್ಮ ಮೊಬೈಲ್ ಸಂಖ್ಯೆಜೋಡಣೆಯನ್ನು ಮಾಡಿಸದೇಇದ್ದುಅಂತಹವರುತಮ್ಮ ಮೊಬೈಲ್ ಸಂಖ್ಯೆಯನ್ನುಜೋಡಣೆಮಾಡಿಕೊಳ್ಳಬೇಕುಎಂದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ಪಡೆಯಲುಆಧಾರ್ ಸಂಖ್ಯೆ ಪ್ರಮುಖ ಪಾತ್ರ ವಹಿಸುತ್ತಿದೆ.ಆಧಾರ್ ಸಂಖ್ಯೆಯು ಬ್ಯಾಂಕ್‌ಖಾತೆಜೋಡಣೆ ಹೊಂದಿ, ಸರ್ಕಾರದ ವಿವಿಧ ಯೋಜನೆಗಳ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ಗಳ ಖಾತೆಗೆ ವರ್ಗಾಯಿಸಲು ಸಹ ಸುಲಭವಾಗಲಿದೆಎಂದ ಸಭೆಯಲ್ಲಿ ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ,ಅಪರಜಿಲ್ಲಾಧಿಕಾರಿ ವೀಣಾ ಬಿ.ಎನ್,ತರಬೇತಿ ನಿರತಐ.ಎ.ಎಸ್‌ಅಧಿಕಾರಿಯತೀಶ್,ಆಧಾರ್ ಪ್ರಾಧಿಕಾರದ ಉಪ ನಿರ್ದೇಶಕರಾಘವೇಂದ್ರಎಸ್‌ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories