ಮುಂಬೈ: ಖಾಸಗಿ ಚಾನೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಟೀಂ ಇಂಡಿಯಾದ ಕುರಿತಾದ ಹಲವು ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ ಚೇತನ್ ಶರ್ಮಾ ಇದೀಗ ಭಾರತ ತಂಡದ ಮುಖ್ಯ ಆಯ್ಕೆಗಾರ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಭಾರತೀಯ ಆಟಗಾರರು ಚುಚ್ಚುಮದ್ದು ತೆಗೆದುಕೊಳ್ಳುವ ಮೂಲಕ ಫಿಟ್‌ನೆಸ್ ಅನ್ನು ಹೆಚ್ಚಿಸುತ್ತಾರೆ ಎಂಬ ಹಿಂದೆಂದೂ ಕೇಳಿರದ ಆರೋಪ ಸೇರಿದಂತೆ ಗಂಗೂಲಿ- ವಿರಾಟ್ ನಡುವಿನ ಜಗಳದ ಬಗ್ಗೆಯೂ ಶರ್ಮಾ ಹೇಳಿಕೊಂಡಿದ್ದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳ ಪ್ರಕಾರ, ಚೇತನ್ ಶರ್ಮಾ ತಮ್ಮ ರಾಜೀನಾಮೆಯನ್ನು ಮಂಡಳಿಗೆ ಕಳುಹಿಸಿದ್ದು, ಅದನ್ನು ಅಂಗೀಕರಿಸಲಾಗಿದೆ.
ಚೇತನ್ ಶರ್ಮಾ ಸ್ಥಾನಕ್ಕೆ ಯಾರು ಸ್ಥಾನಕ್ಕೆ ಕಾಲಿಡುತ್ತಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಪೂರ್ವ ವಲಯದಿಂದ ಆಯ್ಕೆಯಾಗಿರುವ ಶಿವಸುಂದರ್ ದಾಸ್ ಆಯ್ಕೆ ಸಮಿತಿ ಮುಖ್ಯಸ್ಥರಾಗುವ ಸಾಧ್ಯತೆಯಿದೆ. ಚೇತನ್ ಶರ್ಮಾ ಅವರ ಸ್ಟಿಂಗ್ ಆಪರೇಶನ್ ವರದಿ ಹೊರಬಿದ್ದ ಬಳಿಕ ಭಾರತೀಯ ಆಟಗಾರರಿಗೆ ಅದರಲ್ಲೂ ನಾಯಕರಾದ ರೋಹಿತ್ ಮತ್ತು ಹಾರ್ದಿಕ್ ಪಾಂಡ್ಯಗೆ ನಂಬಿಕೆ ಕಳೆದುಹೋಗಿದೆ ಎನ್ನಲಾಗಿದೆ.