ನವದೆಹಲಿ : ಶ್ರದ್ಧಾ ವಾಲ್ಕರ್ ಘೋರ ಪ್ರಕರಣದ ಆರೋಪಿ ಅಫ್ತಾಬ್ ಪೂನವಾಲಾ ನನ್ನು ಕರೆದೊಯ್ಯು ತ್ತಿದ್ದ ಪೊಲೀಸ್ ವ್ಯಾನ್ನ ಮೇಲೆ ದೆಹಲಿಯ ಎಫ್ಎಸ್ಎಲ್ ಕಚೇರಿಯ ಹೊರಗೆ ಹಿಂದೂ ಸೇನೆಯೆಂದು ಹೇಳಿಕೊಂಡ ಕನಿಷ್ಠ ಇಬ್ಬರು ವ್ಯಕ್ತಿಗಳು ಆಯುಧಗಳನ್ನು ಹಿಡಿದು ದಾಳಿ ನಡೆಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡ ವಿಡಿಯೋದಲ್ಲಿ, ಅಫ್ತಾಬ್ನನ್ನು ಕರೆದೊಯ್ಯುಯ್ಯುತ್ತಿದ್ದ ಪೊಲೀಸ್ ವ್ಯಾನ್ನ ಬಾಗಿಲು ತೆರೆಯಲು ಇಬ್ಬರು ಪ್ರಯತ್ನಿಸುತ್ತಿರುವುದನ್ನು ಮತ್ತು ಆಯುಧಗಳಿಂದ ದಾಳಿ ಮಾಡಲು ಮುಂದಾಗಿರುವುದನ್ನು ಕಾಣಬಹುದಾಗಿದೆ.
ಪೊಲೀಸ್ ಸಿಬಂದಿ ದಾಳಿಕೋರರನ್ನು ಓಡಿಸಲು ವ್ಯಾನ್ನಿಂದ ಹೊರಬರುತ್ತಿರುವುದನ್ನು ಕಾಣಬಹುದು ಆದರೆ ಇಬ್ಬರು ವ್ಯಾನ್ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದ್ದಾರೆ. ದಾಳಿಕೋರರನ್ನು ತಡೆಯಲು ಮತ್ತು ವ್ಯಾನ್ಗೆ ದಾರಿ ಮಾಡಿಕೊಡಲು ಮತ್ತೊಬ್ಬ ಪೊಲೀಸ್ ಸಿಬಂದಿ ಗನ್ ಹಿಡಿದು ಹೊರ ಬಂದಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.