ಆ್ಯಶಸ್ ಟೆಸ್ಟ್: 3ನೇ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದ ಇಂಗ್ಲೆಂಡ್, ಮತ್ತೆ ಪ್ರಶಸ್ತಿ ಉಳಿಸಿಕೊಂಡ ದೈತ್ಯ ಆಸಿಸ್ ಪಡೆ

ಮೆಲ್ಬೋರ್ನ್: ಇಂಗ್ಲೆಂಡ್ ವಿರುದ್ಧ ಆ್ಯಶಸ್ ಟೆಸ್ಟ್ ಟೂರ್ನಿಯ ಮೂರನೇ ಪಂದ್ಯದಲ್ಲೂ ಆಸ್ಚ್ರೇಲಿಯಾ ಭರ್ಜರಿ ಜಯ ಗಳಿಸಿದ್ದು, ಸರಣಿಯನ್ನು ಇನ್ನೂ 2 ಪಂದ್ಯ ಬಾಕಿ ಇರುವಂತೆಯೇ ಕೈವಶ ಮಾಡಿಕೊಂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 186ರನ್ ಗಳಿಗೆ ಇಂಗ್ಲೆಂಡ್ ತಂಡ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 267 ರನ್ ಕಲೆಹಾಕಿತ್ತು. ಆ ಮೂಲಕ 81 ರನ್ ಗಳ ಮುನ್ನಡೆ ಸಾಧಿಸಿತ್ತು. ಈ ಸವಾಲಿನ ಹಿನ್ನಡೆಯೊಂದಿಗೆ 2ನೇ ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ತಂಡ ಕೇವಲ 68ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 14 ರನ್ ಗಳ ಜಯಗಳಿಸಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 1 ವಿಕೆಟ್ ಪಡೆದಿದ್ದ ಸ್ಕಾಟ್ ಬೊಲಾಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದ ಇಂಗ್ಲೆಂಡ್ ಪತನಕ್ಕೆ ಕಾರಣವಾದರು. ಆ ಮೂಲಕ ಇಂಗ್ಲೆಂಡ್ ಇನ್ನೂ 2 ಪಂದ್ಯಗಳನ್ನು ಬಾಕಿ ಇರುವಂತೆಯೇ ಆ್ಯಶಸ್ ಸರಣಿಯನ್ನು ಕಳೆದುಕೊಂಡಿದೆ.

Latest Indian news

Popular Stories