ಇಂದು ಇಂಡಿಯಾ-ಪಾಕ್ ಕ್ರಿಕೆಟ್ ಜಿದ್ದಾಜಿದ್ದಿ

ದುಬೈ: ಅರಬ್‌ ನಾಡಿನಲ್ಲಷ್ಟೇ ಅಲ್ಲ, ಕ್ರಿಕೆಟ್‌ ಜಗತ್ತಿನಲ್ಲೇ ಟಿ20 ಕಾವು ಒಮ್ಮೆಲೇ ಏರಿದೆ. ಕ್ರಿಕೆಟ್‌ ಮಾತ್ರವಲ್ಲ, ಕ್ರೀಡಾಲೋಕವೇ ದುಬೈನತ್ತ ಮುಖ ಮಾಡಿ “ಭಾನುವಾರದ ಮಹಾ ಹೋರಾಟದ’ ಕ್ಷಣ ಗಣನೆಯಲ್ಲಿ ತೊಡಗಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆ ಯನ್ನು ಮೀರಿವೆ.

ಎಲ್ಲ ಚಟುವಟಿಕೆಗಳೂ ಸ್ತಬ್ಧಗೊಳ್ಳುವ ಸಮಯವೊಂದು ಸಮೀಪಿ ಸುತ್ತಿದೆ. ಇದಕ್ಕೆಲ್ಲ ಒಂದೇ ಕಾರಣ, ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯ! ಟಿ20 ವಿಶ್ವಕಪ್‌ ಕೂಟದ 2ನೇ ವಿಭಾಗದ ಪಂದ್ಯದಲ್ಲಿ ಭಾನುವಾರ ರಾತ್ರಿ ಭಾರತ- ಪಾಕಿಸ್ತಾನ ಮುಖಾಮುಖೀಯಾಗಲಿವೆ. ಉಳಿದೆಲ್ಲ ಪಂದ್ಯಗಳಿಗಿಂತ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಉತ್ಸಾಹ ದೊಡ್ಡಮಟ್ಟದಲ್ಲೇ ಇರುತ್ತದೆ.

ಪಾಕ್‌ ಎದುರಿನ ಎಲ್ಲ ವಿಶ್ವಕಪ್‌ ಸಮರಗಳಲ್ಲೂ ಜಯಭೇರಿ ಮೊಳಗಿಸಿದ್ದು ಭಾರತದ ಗರಿಮೆಗೆ ಸಾಕ್ಷಿ. ಹೀಗಾಗಿ ಭಾನುವಾರವೂ ಭಾರತ ತಂಡದ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಹಾಗೆಯೇ ಪಾಕಿಸ್ತಾನದ ಮೇಲಿನ ಒತ್ತಡವೂ!

Latest Indian news

Popular Stories

error: Content is protected !!