ಟೆಹ್ರಾನ್(ಇರಾನ್): ವಾಯುವ್ಯ ಇರಾನ್ನಲ್ಲಿ ಕಳೆದ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ (Earthquake) 7 ಜನ ಮೃತಪಟ್ಟಿದ್ದಾರೆ. 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುದ್ದಿ ಮೂಲಗಳ ಪ್ರಕಾರ 5.9 ರಷ್ಟು ತೀರ್ವತೆಯಲ್ಲಿ ಭೂಕಂಪನ ಸಂಭವಿಸಿದೆ. ಮತ್ತು ಭೂಕಂಪನವು ಇರಾನ ಮತ್ತು ಟರ್ಕಿ ಗಡಿ ಅಂಚಿನಲ್ಲಿರುವ ಖೋಯ ನಗರ ಸಮೀಪಿಸಿದೆ.
ಇರಾನ್‌ನ ಪಶ್ಚಿಮ ಅಜೆರ್‌ಬೈಜಾನ್ ಪ್ರಾಂತ್ಯದ ಪ್ರದೇಶಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಇರಾನ್ ತುರ್ತು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪೀಡಿತ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದೆ, ಘನೀಕರಿಸುವ ತಾಪಮಾನ ಮತ್ತು ಕೆಲವು ವಿದ್ಯುತ್ ಕಡಿತ ವರದಿಯಾಗಿದೆ ಎಂದು ತುರ್ತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.