ಇಸ್ರೇಲ್ ಅಟ್ಟಹಾಸ: 8 ಮಂದಿ ಪ್ಯಾಲೆಸ್ಟೀನಿಯರು ಮೃತ್ಯು

ಜೆರುಸಲೆಮ್‌: ಪ್ಯಾಲೆಸ್ಥಿನ್‌ನ ವೆಸ್ಟ್‌ ಬ್ಯಾಂಕ್‌ ಮೇಲೆ ಡ್ರೋನ್‌ಗಳ ಮೂಲಕ ಇಸ್ರೇಲ್‌ ನಡೆಸಿದ ಮಿಲಿಟರಿ ದಾಳಿಯಿಂದ ಕನಿಷ್ಠ 8 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಇಸ್ರೇಲ್‌ ವೈಮಾನಿಕ ದಾಳಿಯಿಂದಾಗಿ ಸೋಮವಾರ ಜೆನಿನ್‌ ನಿರಾಶ್ರಿತರ ಶಿಬಿರ ಇರುವ ಜನನಿಬಿಡ ರಸ್ತೆಗಳಲ್ಲಿ ದಟ್ಟ ಹೊಗೆ ಆವರಿಸಿತ್ತು. ಡ್ರೋನ್‌ಗಳ ಸದ್ದು ಕೇಳಿಸುತ್ತಿತ್ತು. ನಗರದ ಕೆಲವು ಭಾಗಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗಿತ್ತು.

ರಸ್ತೆಗಳಲ್ಲಿ ಮಿಲಿಟರಿ ವಾಹನಗಳು ಸಂಚರಿಸುತ್ತಿದ್ದವು’ ಎಂದು ಅಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಈ ದಾಳಿಯನ್ನು ಪ್ಯಾಲೆಸ್ಥಿàನ್‌ ಮತ್ತು ಜೋರ್ಡನ್‌ ಖಂಡಿಸಿದೆ. ಕಳೆದ ವಾರ ಪ್ಯಾಲೆಸ್ಥಿನ್ ಇಸ್ರೇಲ್‌ ಮೇಲೆ ನಡೆಸಿದ ದಾಳಿ ವೇಳೆ ನಾಲ್ವರು ಇಸ್ರೇಲಿಯನ್ನರು ಮೃತಪಟ್ಟಿದ್ದರು.

Latest Indian news

Popular Stories