ಈಜಲು ಹೋದ ಹನ್ನೊಂದು‌ ಮಂದಿಯಲ್ಲಿ ಏಳು ಬಾಲಕರು ನೀರುಪಾಲು!

ಪಂಜಾಬ್‌: ಈಜಲು ತೆರಳಿದ್ದ ಏಳು ಮಂದಿ‌ ಯುವಕರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಗೋಬಿಂದ್ ಸಾಗರ್ ಸರೋವರದಲ್ಲಿ ನೀರು ಪಾಲಾಗಿದ್ದಾರೆ.

ಬಂಗನಾ ಉಪವಿಭಾಗದ ರಾಯಪುರ ಗ್ರಾಮದ ಗರೀಬ್ ನಾಥ್ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ
ಮೊಹಾಲಿ ಜಿಲ್ಲೆಯ ಬನೂರ್‌ನ ಪವನ್ (35), ರಮಣ್ (19), ಲಖ್ಬೀರ್ (16), ಅರುಣ್ (14), ವಿಶಾಲ (18), ಭೂಪಿಂದರ್ (16), ಮತ್ತು ಲಾಭ್ ಸಿಂಗ್ (17) ಮೃತರಾಗಿದ್ದಾರೆಂದು ಪೊಲೀಸ್ ಅಧಿಕಾರಿ ಪ್ರವೀಣ್ ಧಿಮಾನ್ ಮಾಹಿತಿ ನೀಡಿದ್ದಾರೆ.

ಒಟ್ಟು 11 ಯುವಕರು ಸ್ನಾನ ಮಾಡಲು ಕೆರೆಗೆ ಹೋಗಿದ್ದರು. ಈ ವೇಳೆ ಕೆರೆಯ ಆಳ ತಿಳಿಯದೇ ಒಬ್ಬ ಮೊದಲು ನೀರಿಗೆ ಇಳಿದಿದ್ದು, ಮುಳುಗಲು ಆರಂಭಿಸಿದಾಗ ಆತನನ್ನು ರಕ್ಷಿಸಲು ಆರು ಮಂದಿ ಯುವಕರು ಒಬ್ಬೊಬ್ಬರಂತೆಯೇ ಕೆರೆಗೆ ಹಾರಿ ದುರಂತ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಮೃತರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದ್ದರು ಎಂಬುವುದು ಆಘಾತಕಾರಿ ವಿಚಾರ. ಪೊಲೀಸರು ಘಟನೆ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!