ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇರುವ ಸೇಕ್ರೆಡ್ ಹಾರ್ಡ್ ಕ್ಯಾಥಡ್ರಲ್ ಚರ್ಚ್‌ಗೆ ಭಾನುವಾರ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು.
ಸೇಕ್ರೆಡ್ ಹಾರ್ಡ್ ಕ್ಯಾಥಡ್ರಲ್ ಚರ್ಚ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚರ್ಚ್‌ನ ಪಾದ್ರಿಗಳು ಮತ್ತು ಸಿಬ್ಬಂದಿ ಪ್ರೀತಿಯಿಂದ ಸ್ವಾಗತಿಸಿ ಸತ್ಕರಿಸಿದ್ದಾರೆ.