ಈ ಬಜೆಟ್ ಪ್ರತಿಯೊಂದು ವರ್ಗದ ನಿರೀಕ್ಷೆ ಪೂರೈಸುತ್ತದೆ: ಕೇಂದ್ರ ಸಚಿವ

ಹೊಸದಿಲ್ಲಿ: ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಬುಧವಾರ (ಫೆಬ್ರವರಿ 1) ಕೇಂದ್ರ ಬಜೆಟ್ 2023-2024 ಸಮಾಜದ ಪ್ರತಿಯೊಂದು ವರ್ಗದ ನಿರೀಕ್ಷೆಗಳನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಕೇಂದ್ರ ಬಜೆಟ್ ಮಂಡಿಸುವ ಮುನ್ನ ಮಾತನಾಡಿದ ಚೌಧರಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವಾಗಲೂ ದೇಶದ ಜನರ ಪರವಾಗಿ ಕೆಲಸ ಮಾಡಿದೆ ಎಂದು ಹೇಳಿದರು.

ಯೂನಿಯನ್ ಬಜೆಟ್ 2023 ಸಮಾಜದ ಪ್ರತಿಯೊಂದು ವರ್ಗದ ನಿರೀಕ್ಷೆಗಳನ್ನು ಪೂರೈಸುತ್ತದೆ. ಮೋದಿ ಸರ್ಕಾರವು ಯಾವಾಗಲೂ ದೇಶದ ಜನರ ಪರವಾಗಿ ಕೆಲಸ ಮಾಡಿದೆ ಎಂದು ಅವರು ಸುದ್ದಿ ಸಂಸ್ಥೆ ಎಎನ್ಐ ಗೆ ತಿಳಿಸಿದರು.

ಬುಧವಾರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಐದನೇ ಬಜೆಟ್ ಮಂಡಿಸಲಿದ್ದಾರೆ. 2023-24ರ ಕೇಂದ್ರ ಬಜೆಟ್ ಕೋವಿಡ್-19 ನಂತರದ ಮೊದಲ ಸಾಮಾನ್ಯ ಬಜೆಟ್ ಆಗಿರಲಿದೆ.

Latest Indian news

Popular Stories