ಉಡುಪಿಯಲ್ಲಿ ಇಂದು ಬೆಳಿಗ್ಗೆ ಮಡಿಕೇರಿ ಅನುಭವ – ದಟ್ಟ ಮಂಜು

ಉಡುಪಿ: ಫೆಬ್ರವರಿ 23 ರಂದು ಗುರುವಾರ ಮುಂಜಾನೆ ನಗರ ಮತ್ತು ಹೊರವಲಯದಲ್ಲಿ ದಟ್ಟವಾದ ಮಂಜು ಕಂಡುಬಂದಿದೆ. ದೈನಂದಿನ ಕೆಲಸಕ್ಕಾಗಿ ಹೊರಹೋಗುವ ಜನರು, ವಾಹನಗಳು ದಟ್ಟ ಮಂಜಿನಿಂದಾಗಿ ಕಷ್ಟ ಪಡುವ ಸನ್ನಿವೇಶ ವ್ಯಕ್ತವಾಗಿತ್ತು.

ಕಳೆದೆರಡು ದಿನಗಳಿಂದ ಬಿಸಿಲಿನ ವಾತಾವರಣವಿದ್ದ ಕಾರಣ ದಟ್ಟವಾದ ಮಂಜು ನಗರ ಮತ್ತು ಹೊರವಲಯದ ನಿವಾಸಿಗಳನ್ನು ಆಶ್ಚರ್ಯಚಕಿತಗೊಳಿಸಿತು. ನಗರ ಪ್ರದೇಶ, ಮಲ್ಪೆ, ಮಣಿಪಾಲ, ಕಾಪು ಮತ್ತು ಜಿಲ್ಲೆಯ ಇತರ ಭಾಗಗಳು ಕಳಪೆ ಗೋಚರತೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

ಬೆಳಿಗ್ಗೆ 8.30 ತನಕ ಈ ಸನ್ನಿವೇಶ ಕಂಡು ಬಂದಿತು. ಸಾಮಾಜಿಕ ಜಾಲಾತಾಣದಲ್ಲಿ ಮಂಜು ಕವಿದ ವಾತಾವರಣದ ಫೋಟೊ, ವೀಡಿಯೋ ವೈರಲಾಗಿದೆ.

Latest Indian news

Popular Stories